ಮೇಲ್‌ಗಂಗೊಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಶತಕಲಶಾಭಿಷೇಕ, ರಜತ ಸಿಂಹಾಸನ ಪ್ರಭಾವಳಿ ಸಮರ್ಪಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮೇಲ್‌ಗಂಗೊಳ್ಳಿ ಪೈ ಕುಟುಂಬದವರು ಸುಮಾರು ನಾಲ್ಕು ಶತಮಾನಗಳಿಂದ ಆರಾಧಿಸಿಕೊಂಡು ಬಂದಿರುವ ಮೇಲ್‌ಗಂಗೊಳ್ಳಿ ರಾಮ ಪೈ ಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಜತ ಸಿಂಹಾಸನ ಮತ್ತು ಪ್ರಭಾವಳಿ ಸಮರ್ಪಣೆ ಕಾರ್ಯಕ್ರಮ ಹಾಗೂ ಶ್ರೀ ದೇವರಿಗೆ ಶತಕಲಶಾಭಿಷೇಕ ಸೇವೆಯು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನಡೆಯಿತು.

Call us

Call us

ದೇವಸ್ಥಾನಕ್ಕೆ ಚಿತ್ತೈಸಿದ ಶ್ರೀಗಳವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀಗಳಿಂದ ಶ್ರೀದೇವರಿಗೆ ಶತಕಲಶಾಭಿಷೇಕ, ಮಂಗಲ ದ್ಯವ್ಯ ನಿರೀಕ್ಷಣೆ, ಶ್ರೀಗಳಿಗೆ ಪಾದ್ಯ ಪೂಜೆ, ಶ್ರೀಗಳಿಂದ ಆಶೀರ್ವಚನ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಅಜಿತ್ ಭಟ್, ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ವೇದಮೂರ್ತಿ ಜಿ.ವಿಠಲದಾಸ ಭಟ್ ಮೊದಲಾದ ವೈದಿಕರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ಮೋಹನದಾಸ ಭಟ್, ವೇದಮೂರ್ತಿ ಪವನ್ ಆಚಾರ್ಯ, ವೇದಮೂರ್ತಿ ಶಿವಾನಂದ ಭಟ್, ಮೇಲ್‌ಗಂಗೊಳ್ಳಿ ಪೈ ಕುಟುಂಬದ ಎಂ.ನರಸಿಂಹ ಪೈ, ಎಂ.ಜಿ.ಮಾಧವ ಪೈ, ಎಂ.ಮಾಧವರಾಯ ಪೈ, ಎಂ.ವಿನೋದ ಪೈ, ಎಂ.ಮುಕುಂದ ಪೈ, ಎಂ.ಗೋವಿಂದ್ರಾಯ ಪೈ, ಎಂ.ಸುಬ್ರಾಯ ಪೈ ಮೊದಲಾದವರು ಉಪಸ್ಥಿತರಿದ್ದರು.

Call us

Call us

Leave a Reply

Your email address will not be published. Required fields are marked *

2 × 2 =