ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಯಡ್ತರೆಯ ಜೆಎನ್‌ಆರ್ ಕಲಾಮಂದಿರದಲ್ಲಿ ಜರುಗಿತು.

Call us

ಮೋಗವೀರ ಯುವ ಸಂಘಟನೆ ಬೈಂದೂರು ಶಿರೂರು ಘಟಕದ ನೂತನ ಅಧ್ಯಕ್ಷ ಗಂಗಾಧರ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಜಗನ್ನಾಥ ಕೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ ನೂತನ ಪದಾಧಿಕಾರಿಗಳ ಮೂಲಕ ಸಂಘವು ಮತ್ತಷ್ಟು ಜನಪರ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬೈ ಮೋಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಅಧ್ಯಕ್ಷ ಮಹಾಬಲ ಕುಂದರ್, ಮಾಜಿ ಅಧ್ಯಕ್ಷ ನಾಣು ಡಿ. ಚಂದನ್ ಮಸ್ಕಿ, ಜಿಪಂ ಮಾಜಿ ಅಧ್ಯಕ್ಷ ಮದನ ಕುಮರ್, ಹೆಮ್ಮಾಡಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ, ಸಲಹಾ ಸಮಿತಿ ಸದಸ್ಯ ರಾಮ ಮೊಗವೀರ, ಮೊಗವೀರಗರಡಿ ಶ್ರೀ ಜೈನಜಟ್ಟಿಗೇಶ್ವರ ದೇವಳದ ಅಧ್ಯಕ್ಷ ನಾರಾಯಣ ಅಕ್ಷಯ ಶ್ರೀನಿವಾಸ, ಮೊಗವೀರ ಯುವ ಸಂಘಟನೆಯ ನಿಕಟಪೂರ್ವಾಧ್ಯಕ್ಷ ನಾಗರಾಜ ಚಂದನ್, ಜಿಲ್ಲಾ ಸಂಘಟನೆಯ ಕ್ರೀಡಾ ಕಾರ್ಯದರ್ಶಿ ಕೃಷ್ಣ ಮೊಗವೀರ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸಂಘಟನೆಯ ನೂತನ ಅಧ್ಯಕ್ಷ ಗಂಗಾಧರ ಮೊಗವೀರ ಪಡುವರಿ ಅವರಿಗೆ ನಿಕಟಪೂರ್ವಾಧ್ಯಕ್ಷ ನಾಗರಾಜ ಚಂದನ್ ಅಧಿಕಾರ ಹಸ್ತಾಂತರಿಸಿದರೇ, ನೂತನ ಕಾರ್ಯದರ್ಶಿ ವಸಂತ ಮೊಗವೀರ ತಗ್ಗರ್ಸೆ ಅವರಿಗೆ ನಿಕಟಪೂರ್ವ ಕಾರ್ಯದರ್ಶಿ ಯೋಗೀಶ್ ಶಿರೂರು ಅಧಿಕಾರ ಹಸ್ತಾಂತರಿಸಿದರು. ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಮೋಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಉಪಾಧ್ಯಕ್ಷ ಯೋಗೀಶ್ ಶಿರೂರು ಸ್ವಾಗಿತಿಸಿದರು. ಕಾರ್ಯದರ್ಶಿ ವಸಂತ ವರದಿ ವಾಚಿಸಿದರು. ಪಾಂಡುರಂಗ ಅಳ್ವೆಗದ್ದೆ ಕಾರ್ಯಕ್ರಮ ನಿರೂಪಿಸಿದರು.

Mogaveera Yuva Sangatane Byndoor - Shiruru Unit (2) Mogaveera Yuva Sangatane Byndoor - Shiruru Unit (3) Mogaveera Yuva Sangatane Byndoor - Shiruru Unit (4) Mogaveera Yuva Sangatane Byndoor - Shiruru Unit (5)

Leave a Reply

Your email address will not be published. Required fields are marked *

20 − seventeen =