ಮೊಗೇರಿ: ಅಡಿಗರ ಪ್ರಸಿದ್ಧ ಭಾವಗೀತೆಗಳ ಗಾಯನ ತರಬೇತಿಗೆ ಚಾಲನೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ನವೋದಯದಲ್ಲಿ ಕಾವ್ಯ ರಚನೆ ಆರಂಭಿಸಿ, ನವ್ಯ ಪಂಥವನ್ನು ಹುಟ್ಟುಹಾಕಿ ನವ್ಯೋತ್ತರದಲ್ಲೂ ಪ್ರಸ್ತುತರೆನಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗರ ಕಾವ್ಯದ ನಡೆ ಅನನ್ಯವಾದುದು. ತಮ್ಮ ಸಮಕಾಲೀನ ಪ್ರಪಂಚಕ್ಕೆ ಅಡಿಗರಂತೆ ಸ್ಪಂದಿಸಿದ ಕವಿ ಇನ್ನೊಬ್ಬರಿಲ್ಲ. ಭಾಷೆ ಮತ್ತು ಪ್ರತಿಮೆಗಳ ಬಳಕೆಯಲ್ಲಿ ಅವರು ಏರಿದ ಔನ್ನತ್ಯ ಅಸಾಧಾರಣವಾದುದು. ಅವರ ಕಾವ್ಯ ಅವರ ಕಾಲವನ್ನೂ ಮೀರಿ ಓದು, ಚರ್ಚೆ, ವಿಮರ್ಶೆಗೆ ಒಳಗಾಗುತ್ತಿರುವುದು ಅದರ ಸಾರ್ವಕಾಲಿಕ ಮೌಲ್ಯಕ್ಕೆ ಸಾಕ್ಷಿ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು.

Call us

Click Here

Click here

Click Here

Call us

Visit Now

Click here

ಸಿರಿ ಮೊಗೇರಿ ಸಮಷ್ಟಿ ವೇದಿಕೆಯ ಆಶ್ರಯದಲ್ಲಿ ಮೊಗೇರಿ ಶಂಕರನಾರಾಯಣ ದೇವಸ್ಥಾನದ ಆವರಣದಲ್ಲಿ ಆರಂಭವಾದ ಅಡಿಗರ ಪ್ರಸಿದ್ಧ ಭಾವಗೀತೆಗಳ ಹಾಡುವ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಕಾವ್ಯ ಪರಂಪರೆಯಲ್ಲಿ ಶಾಶ್ವತ ಸ್ಥಾನ ಪಡೆದ ಅಡಿಗರು ಮೊಗೇರಿಯ ಅಮೂಲ್ಯ ಆಸ್ತಿ. ಇಲ್ಲಿ ಅಡಿಗರ ನಿರಂತರ ಸ್ಮರಣೆ ನಡೆಸುವ ಮೂಲಕ ಈ ಹಿರಿಮೆಯನ್ನು ಮೊಗೇರಿ ತನ್ನದಾಗಿಸಿಕೊಳ್ಳಬೇಕು ಎಂದು ಅವರು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪರಿಷತ್ತು ಅಡಿಗರ ಜನ್ಮ ಶತಾಬ್ಧವನ್ನು ಅರ್ಥಪೂರ್ಣವಾಗಿ ಆಚರಿಸಲಿದೆ ಎಂದರು. ವೇದಿಕೆಯ ಸಂಯೋಜಕ ಮೊಗೇರಿ ಜಯರಾಮ ಅಡಿಗ ಸ್ವಾಗತಿಸಿ, ಪ್ರಸ್ತಾವನೆಗೈದರು. ಬೆಂಗಳೂರಿನ ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷ ಪಿ. ಚಂದ್ರಶೇಖರ ಚಡಗ ಕವಿ ಸ್ಮರಣೆ ಮಾಡಿದರು. ಮೊಗೇರಿ ಚಂದ್ರಶೇಖರ ಅಡಿಗ ವಂದಿಸಿದರು. ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.

ಖ್ಯಾತ ಸುಗಮ ಸಂಗೀತಗಾರ ಗರ್ತಿಕೆರೆ ರಾಘಣ್ಣ ಮತ್ತು ಗಣೇಶ ಗಂಗೊಳ್ಳಿ ಅಡಿಗರ ಆಯ್ದ ಕವನಗಳನ್ನು ಹಾಡಿದರು. ನಗರ ಚಂದ್ರಶೇಖರ ಉಡುಪ, ಸುನಿಲ್ ಉಡುಪ ಮತ್ತು ಡಾ. ಅಶೋಕ ಕುಂದಾಪುರ ಸಹಕರಿಸಿದರು.
ಮೂರು ದಿನಗಳ ಕಾರ‍್ಯಕ್ರಮಕ್ಕೆ ಉಪ್ಪುಂದದ ಕುಂದ ಅಧ್ಯಯನ ಸಂಸ್ಥೆ, ಖಂಬದಕೋಣೆಯ ಆರ್. ಕೆ. ಸಂಜೀವ ರಾವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರಿನ ಶಿವರಾಮ ಕಾರಂತ ವೇದಿಕೆ ಸಹಯೋಗ ನೀಡಿದ್ದು, ನಾಯ್ಕನಕಟ್ಟೆಯ ಸಂವೇದನಾ ಟ್ರಸ್ಟ್, ಅರೆಹಾಡಿ ನಾಗಜಟ್ಟಿಗ ಸಂಗೀತ ಕೇಂದ್ರ, ವಿಪ್ರ ರಂಜನಿ, ಬೈಂದೂರಿನ ಲಾವಣ್ಯ, ಸುರಭಿ ಕಲಾಶಾಲೆ ಮತ್ತು ಕುಂದಾಪುರದ ಸಾಧನಾ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ ಸಹಕಾರ ನೀಡಿವೆ.

Call us

Leave a Reply

Your email address will not be published. Required fields are marked *

4 × 4 =