ಮೊದಲ ತಾಪಂ ಸಾಮಾನ್ಯ ಸಭೆಯಲ್ಲೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸದಸ್ಯರು

Click Here

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಗ್ರಾಮೀಣ ಭಾಗದ ಸಂಪರ್ಕಕ್ಕೆ ರೂಟ್ ಮ್ಯಾಪ್ ಆಗಿದ್ದರೂ ಬಸ್ಸು ಓಡುತ್ತಿಲ್ಲ, ಶಾಲೆಗಳು ಶಿಥಿಲಗೊಂಡಿದ್ದರೂ ದುರಸ್ಥಿ ನಡೆಯುತ್ತಿಲ್ಲ. ನಾವುಂದದಲ್ಲಿ ವಿದ್ಯಾರ್ಥಿಗಳು ಒಂದೇ ವಿಷಯದಲ್ಲಿ ಫೇಲ್ ಆಗಿದ್ದರೂ ಕ್ರಮ ಕೈಗೊಂಡಿಲ್ಲ. ಶಂಕರನಾರಾಯಣದ ಬಸ್ ನಿಲ್ದಾಣವನ್ನು ತಾಪಂ ಅನುಮತಿ ಪಡೆಯದೇ ಏಕಾಏಕಿ ಕೆಡವಿದ್ದು ಸರಿಯಲ್ಲ. ಪಡಿತರ ಸಮಸ್ಯೆ ನಿವಾರಣೆಯಾಗಿಲ್ಲ. 94-ಸಿ ಗೊಂದಲ ಮುಗಿದಿಲ್ಲ. ಇದು ಮಂಗಳವಾರ ಕುಂದಾಪುರ ತಾಪಂ ಸಭಾಂಗಣದಲ್ಲಿ ಜರುಗಿದ ಪ್ರಥಮ ತಾಪಂ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರ ಹೈಲೈಟ್ಸ್.

Call us

Call us

Visit Now

ಉತ್ತರ ಕೊಡದ ಮೇಲೆ ಸಭೆಗೆ ಬಂದೇನು ಪ್ರಯೋಜನ?
ನಡುವಳಿಯಲ್ಲಿ ಕೇಳವಾಗುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಅಧಿಕಾರಿಗಳು ಬರೋದಿಲ್ಲ. ಅವರ ಪರವಾಗಿ ಬರುವವರಿಗೆ ಸಮಸ್ಯೆ ಅರಿವೇ ಇರೋದಿಲ್ಲ. ಪೂರ್ವ ತಯಾರಿಯಿಲ್ಲದೆ, ಕಾಟಾಚಾರಕ್ಕೆ ಸಭೆಗೆ ಹಾಜರಾಗುವುದಾದರೇ ಅದರ ಅವಶ್ಯಕತೆ ಏನುದೆ ಎನಿದೆ ಎಂದು ಶಂಕರನಾರಾಯಣ ತಾಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು. ಕುಂದಾಪ್ರ ಡಾಟ್ ಕಾಂ ವರದಿ.

Click here

Click Here

Call us

Call us

ಬಸ್ಸು ಬಿಡದಿದ್ದರೇ ಪ್ರತಿಭಟಿಸುವ ಎಚ್ಚರಿಕೆ:
ಬೈಲೂರು, ಕೊಂಡಳ್ಳಿ ಕ್ರೂಢಬೈಲೂರು ಗ್ರಾಮೀಣ ಭಾಗಕ್ಕೆ ಬಸ್ ಸಂಚಾರಕ್ಕಾಗಿ 2014 ರಿಂದ ಒತ್ತಾಯ ಮಾಡುತ್ತಾ ಬರಲಾಗಿದೆ. ಶಂಕರನಾರಾಯಣ ಗ್ರಾಪಂ ಸಭೆಯಲ್ಲೂ ಬಸ್ ಸಂಚಾರ ಕಲ್ಪಿಸುವಂತೆ ನಿರ್ಣಯ ಮಂಡಿಸಿ, ಪ್ರತಿ ಸಾರಿಗೆ ಇಲಾಖೆಗೆ ಕಳುಹಿಸಲಾಗಿದೆ. ಆದರೂ ಸಾರಿಗೆ ಅಧಿಕಾರಿಗಳು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ನೀವೇನು ಅವಘಡ ಸಂಭವಿಸದ ಮೇಲೆ ಎದ್ದೇಳುವುದಾ. ಇಲ್ಲಾ ಅನಾಹುತ ನಡೆಯುವ ಮುನ್ನಾ ಎಚ್ಚರಾಗಿತ್ತೀರಾ? ಗ್ರಾಮೀಣ ಭಾಗದ ಸಾರಿಗೆ ಸಂಪರ್ಕಕ್ಕೆ ರೂಟ್ ಮ್ಯಾಪ್ ಸಿದ್ದವಾಗಿದ್ದರೂ, ಟೈಮ್ ನಿಗದಿ ಪಡಿಸದೆ ಇದೂ ವರಗೆ ಬಸ್ ಬಿಡದಿರಲು ಕಾರಣವೇನು ಎಂದರು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪೂರಕವಾಗಿ ಮಾತನಾಡಿದ ಹೆಮ್ಮಾಡಿ ತಾಪಂ ಸದಸ್ಯ ರಾಜು ದೇವಾಡಿಗ, ಹಿಂದೆ ಹೊಸ್ಕೇಟೆ ಕಂಚಿಕಾನ್ ಮಾರ್ಗವಾಗಿ ಗಂಗೊಳ್ಳಿಗೆ ಹೋಗುತ್ತಿದ್ದ ಬಸ್ ಪತ್ತೆಯಿಲ್ಲ. ಈ ಭಾಗದ ಶಾಲಾ ವಿದ್ಯಾರ್ಥಿಳು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಮಾಲೀಕರ ಕೇಳಿದರೆ ಪರ್ಮಿಟ್ ಕ್ಯಾನ್ಸಲ್ ಆಗಿದೆ ಎನ್ನುತ್ತಾರೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಮಾಹಿತಿ ಇದೆಯಾ. ಪರ್ಮಿಟ್ ಇದ್ದರೂ ಬಸ್ ಓಡಿಸದ ಮಾಲೀಕರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು.

Click Here

ರೋಟ್ ಮ್ಯಾಪ್ ಸಿದ್ದವಿದ್ದು, ಹತ್ತುದಿನದೊಳಗೆ ಟೈಮ್ ಫಿಕ್ಸ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಅನುಕೂಲ ಮಾಡಿಕೊಡದಿದ್ದರೆ, ಶಂಕರನಾರಾಯಣ ರಸ್ತೆ ಬ್ಲಾಕ್ ಮಾಡಿ, ಯಾವವಾಹವನ್ನೂ ಓಡಲಸಲು ಬಿಡದೆ ರಸ್ತೆ ಮೇಲೆ ಧರಣಿ ನಡೆಸಲಾಗುತ್ತದೆ ಎಂದು ಸದಸ್ಯರು ಎಚ್ಚರಿಸಿದರು. ತಾಪಂ ಸದಸ್ಯರ ಎಚ್ಚರಿಕೆ ನಂತರ ಸಾರಿಗೆ ಸಹಾಯಕ ಅಧಿಕಾರಿ ಜೂನ್.30 ರಂದು ಸಭೆ ಆಯೋಜಿಸಲಾಗಿದ್ದು, ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಮಜಾಯಸಿ ನೀಡಿದರು.

ಶಿಕ್ಷಕರ ಒಳಜಗಳದಿಂದ ಶಾಲೆಯಲ್ಲಿ ಮಕ್ಕಳಿಲ್ಲ!
ಬೈಂದೂರಿನ ಬಾಡಾ ಶಾಲಾಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿದ್ದು, ಇದಕ್ಕೆ ಕಾರಣ ಏನು. ಮಕ್ಕಳ ಸಂಖ್ಯೆ ವೃದ್ಧಿಸಲು ಶಿಕ್ಷಣ ಇಲಾಖೆ ಏನು ಕ್ರಮ ಕೈಗೊಂಡಿದ್ದೀರಿ. ಬಾಡಾ ಶಾಲಾ ವಿದ್ಯಾರ್ಥಿಗಳು ಬೇರೆ ಶಾಲೆಗೆ ಸೇರುವುದನ್ನು ತಪ್ಪಿಸಲು ಏನು ಮಾಡಲಾಗಿದೆ ಎಂದು ಬೈಂದೂರು ತಾಪಂ ಸದಸ್ಯ ಮಾಲಿನಿ ಕೆ. ಪ್ರಶ್ನೆಗೆ, ಬಾಡಾದಲ್ಲಿ ಶಿಕ್ಷಕರ ಒಳಜಗಳದಿಂದ ಹಾಜರಾತಿ ಕಡಿಮೆಯಾಗಿತ್ತಿದೆ ಎಂದು ಬೈಂದೂರು ವಲಯ ಶಿಕ್ಷಣಾಧಿಕಾರಿ ನೀಡಿದ ಉತ್ತರ ಹಾಸ್ಯಕ್ಕೀಡು ಮಾಡಿತು.

ನಾವುಂದ ಪ್ರೌಢಶಾಲೆ ಫಲಿತಾಂಶ ಕುಂಟಿತವಾಗಲು ಕಾರಣ ಏನು? ಇಂಗ್ಲೀಷ್ ಮೀಡಿಯಂನಲ್ಲಿ ಕಲಿಯುತ್ತಿದ್ದ ೩೨ ಜನ ವಿದ್ಯಾರ್ಥಿಗಳು ಪಾಸಾಗಿದ್ದು, ಕನ್ನಡ ಮೀಡಿಯಂನಲ್ಲಿ ಒಟ್ಟು 70ರಲ್ಲಿ 32 ವಿದ್ಯಾರ್ಥಿಗಳ ಗಣಿತ ಒಂದೇ ವಿಷಯದಲ್ಲಿ ಅನುತ್ತೀರ್ಣರಾಗಿರುವುದಕ್ಕೆ ಕಾರಣ ಏನು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಪ್ರಶ್ನಿಸಿದರು.

ನಾವುಂದ ಶಾಲೆಯಲ್ಲಿ ಫಲಿತಾಂಶ ಕಡಿಮೆ ಆಗಿರುವ ಬಗ್ಗೆ ಶಿಕ್ಷಕರ ಪೋಷಕರ ಸಭೆ ನಡೆಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸಿ, ಉತ್ತಮ ಫಲಿತಾಂಶ ಪಡೆಯುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣಾಧಿಕಾರಿ ಹೇಳಿದರು. ಕುಂದಾಪ್ರ ಡಾಟ್ ಕಾಂ ವರದಿ.

ಶಾಲೆಗಳ ದುರಸ್ತಿಗೆ ಆದ್ಯತೆ ನೀಡಿ:
ಮಳೆಗಾಲ ಆರಂಭವಾಗಿದ್ದು ಶಿಥಿಲ ಶಾಲಾ ಕಟ್ಟ ದುರಸ್ತಿ ಬಗ್ಗೆ ಅನುದಾನ ಕಾದಿರಿಸಲಾಗಿದೆ. ಆದರೆ ಆಧ್ಯತೆ ಮತ್ತು ತುರ್ತು ರಸ್ತೆ ಶಾಲೆಗಳ ಗಮನದಲ್ಲಿರಿಸಿ ಅನುದಾನ ಕಾದಿರಿಸಬೇಕು. ತಾಪಂ ಸದಸ್ಯರ ಆದ್ಯತೆ ಮೇಲೆ ಶಾಲೆಗಳಿಗೆ ಅನುದಾನ ಹಂಚಿಕೆ ಮಾಡಬೇಕು ಎಂದು ರಾಜು ದೇವಾಡಿಗ ಹೇಳಿಕೆಗೆ ನಾರಾಯಣ ಕೆ.ಗುಜ್ಜಾಡಿ, ಮೌಲಾನ ದಸ್ತಗೀರ್ ಸಾಹೇಬ್, ಪುಷ್ಪರಾಜ್ ಶೆಟ್ಟಿ, ಇಂದಿರಾ ಶೆಟ್ಟಿ ದ್ವನಿಗೂಡಿಸಿದರು. ತಾಪಂ ಸದಸ್ಯರ ಗಮನಕ್ಕೆ ತಂದು ತುರ್ತು ಅವಶ್ಯವಿರುವ ಶಾಲೆಗಳ ಪಟ್ಟಿಮಾಡಿ ದುರಸ್ತಿ ಮಾಡಲಾಗುತ್ತದೆ ಎಂದು ಅಧಿಕಾರಿ ಹೇಳಿದರು. ಕುಂದಾಪ್ರ ಡಾಟ್ ಕಾಂ ವರದಿ.

ಶಂಕರನಾರಾಯಣ ಬಸ್ ನಿಲ್ದಾಣ ನೆಲ ಸಮ, ಪಡಿತರ ಚೀಟಿ, ಅರಣ್ಯ ಸಮಿತಿ, ೯೪-ಸಿ, ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಮೋವಾಡಿ ದುರಂತದ ಬಗ್ಗೆ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ತಾಪಂ ಇಓ ನಾರಾಯಣ ಸ್ವಾಮಿ ಇದ್ದರು/ ಕುಂದಾಪ್ರ ಡಾಟ್ ಕಾಂ ವರದಿ./

tp-meeting-1 tp-meeting-3 tp-meeting-2 tp-meeting-5

Leave a Reply

Your email address will not be published. Required fields are marked *

four × 4 =