ಮೊಬೈಲ್ ಅಂಗಡಿಗೆ ಕಳ್ಳರ ಲಗ್ಗೆ ಲಕ್ಷಾಂತರ ಮೌಲ್ಯದ ಮೊಬೈಲ್ ಕಳ್ಳತನ

Call us

Call us

ಕುಂದಾಪುರ : ರಾತ್ರಿ ಕೊಟೇಶ್ವರ ಹೆದ್ದಾರಿ ಸಮೀಪ ಮೊಬೈಲ್ ಮಾರಾಟದ ಅಂಗಡಿಯ ಶಟರ್ ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 5ಲಕ್ಷ ಮೌಲ್ಯದ ಮೊಬೈಲುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

Call us

Call us

Call us

ಹೆದ್ದಾರಿ ಪಕ್ಕದಲ್ಲಿರುವ ಕೋಟಿಲಿಂಗೇಶ್ವರ ಟವರ್ಸ್ ನ ಮೊದಲ ಅಂತಸ್ಥಿನಲ್ಲಿ ಸುರೇಶ್ ಪೂಜಾರಿ ಎಂಬವರಿಗೆ ಸೇರಿದ ಸನ್ನಿದಿ ಮೊಬೈಲ್ಸ್ ಕೇರ್ ಹೆಸರಿನ ಮೊಬೈಲ್ ಮಾರಾಟದ ಅಂಗಡಿಯಿದ್ದು ಎಂದಿನಂತೆ ವ್ಯವಹಾರ ಮುಗಿಸಿ ನಿನ್ನೆ ಮನೆಗೆ ತೆರಳಿದ ಅವರು ಮರುದಿನ ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ ಕಳ್ಳತನ ವಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಮುಂಭಾಗದ ಶಟರಿನ ಬೀಗವನ್ನು ಒಡೆದು ಒಳ ಪ್ರವೇಶಿಸಿದ ಕಳ್ಳರು ಅಂಗಡಿಯೆಲ್ಲ ಜಾಲಾಡಿ ಬೆಲಬಾಳುವ ಸುಮಾರು 25 ಮೊಬ್ಯಲ್ ಸೆಟ್ ಗಳನ್ನು ಕಳ್ಳತನ ಮಾಡಿದ್ದಾರೆ. ಯಾವಾಗಲೂ ಮೊಬೈಲ್ ಗಳನ್ನು ಮನೆಗೆ ಕೊಂಡೊಯ್ಯುವ ಪರಿಪಾಠ ವಿಟ್ಟುಕೊಂಡಿದ್ದ ಸುರೇಶ್ ಮಳೆಯ ಕಾರಣ ಕೆಲವು ದಿನಗಳಿಂದ ಮೊಬೈಲ್ ಗಳನ್ನು ಅಂಗಡಿಯಲ್ಲಿಯೇ ಇರಿಸುತ್ತರಿದ್ದರೆನ್ನಲಾಗಿದೆ. ಸ್ಥಳಕ್ಕೆ ಪೊಲೀಸ್ ಶ್ವಾನ ದಳವು ಆಗಮಿಸಿತ್ತು ಕಳೆದ ಮಳೆಗಾಲದಲ್ಲಿಯೂ ಸಹಾ ಈ ಭಾಗದ ಕೆಲವು ಅಂಗಡಿಗಳ ಶಟರ್‌ನ ಬೀಗ ಮುರಿದು ಕಳ್ಳತನ ವಾಗಿರುವುದು ಚರ್ಚೆ ಯಗುತ್ತಿರುವಾಗಲೇ ಇದೀಗ ಈ ಮಳೆಗಾಲದಲ್ಲಿಯೂ ಸಹಾ ಕಳ್ಳರು ಮತ್ತೇ ಲಗ್ಗೆ ಹಾಕಿರುವುದರ ಬಗ್ಗೆ ಸಾರ್ವ ಜನಿಕರು ಆತಂಕಿತರಾಗಿದ್ದಾರೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಮಲೈ, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Call us

Call us

IMG-20150702-WA0033

Leave a Reply

Your email address will not be published. Required fields are marked *

fifteen − 1 =