ಯಕ್ಷಗಾನಕ್ಕೆ ಕಾರಂತರ ಕೊಡುಗೆ ಅವಿಸ್ಮರಣೀಯ: ಅಂಬಾತನಯ ಮುದ್ರಾಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಾರಂತ ಥೀಮ್ ಪಾರ್ಕ್‌ಗೆ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಇತ್ತೀಚೆಗೆ ಭೇಟಿ ನೀಡಿ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಆರ್ಟ್ ಗ್ಯಾಲರಿ, ರಂಗ ಮಂದಿರ , ಗ್ರಂಥಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ವೀಕ್ಷಿಸಿ ಮಾತನಾಡಿದ ಅಂಬಾತನಯ ಮುದ್ರಾಡಿ, ಶಿವರಾಮ ಕಾರಂತರು ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ, ಯಕ್ಷಗಾನ ಬ್ಯಾಲೆ ಮೂಲಕ ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದವರು ಕಾರಂತರು ಅಂತಹ ವ್ಯಕ್ತಿ ಹೆಸರಿನಲ್ಲಿ ಈ ಕಾರಂತ ಥೀಮ್ ಪಾರ್ಕ್ ಚಟುವಟಿಕೆ ನಡೆಸುತ್ತಿರುವ ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಮ ತುಳುವೆರ್ ಸಂಘಟನೆಯ ಸುಕುಮಾರ್ ಮುದ್ರಾಡಿ, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಯಕ್ಷಗಾನ ಗುರು ಸುಬ್ರಹ್ಮಣ್ಯ ಪ್ರಸಾದ್, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಲಲಿತಾ ಮತ್ತಿತ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

nine − 3 =