ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಗಾನ ಕಲೆಯ ಸಿಡಿಲ ಮರಿ ಎಂದೇ ಖ್ಯಾತರಾಗಿರುವ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ಗೋಪಾಲ ಆಚಾರ್ಯ ಅವರು ಕರಾವಳಿಯ ವಿವಿಧ ಮೇಳಗಳಲ್ಲಿ ವೇಷಕಟ್ಟಿ ಕುಣಿದಿದ್ದಾರೆ. ತಮ್ಮ ೬೩ನೇ ವಯಸ್ಸಿನಲ್ಲಿಯೂ ಅತಿಥಿ ಕಲಾವಿದರಾಗಿ ಕಲಾ ಸೇವೆಯಲ್ಲಿ ಸಕ್ರೀಯರಾಗಿದ್ದಾರೆ. ನಾಗೂರಿನಲ್ಲಿ ಪ್ರತಿವರ್ಷ ಒಂದು ವಾರಗಳ ಕಾಲ ಯಕ್ಷಗಾನ ತಾಳಮದ್ದಳೆಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ. ಮಲೆನಾಡಿನವರಾದ ಅವರು ಪ್ರಸ್ತುತ ನಾಯ್ಕನಕಟ್ಟೆಯಲ್ಲಿ ನೆಲೆಸಿದ್ದಾರೆ.