ಯಕ್ಷಗಾನದ ಸ್ತ್ರೀ ಪಾತ್ರಧಾರಿ ಶಶಿಧರ್ ಪಡುಕೋಣೆ ಇನ್ನಿಲ್ಲ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಧರ್ಮಸ್ಥಳ ಮೇಳದ ಸ್ತ್ರೀ ಪಾತ್ರಧಾರಿ ಶಶಿಧರ ಪಡುಕೋಣೆ ಇಂದು ಸಂಜೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕೆಲ ದಿನಗಳ ಹಿಂದ ಅಸೌಖ್ಯರಾಗಿದ್ದ ಶಶಿಧರ್ ಅವರು ಧಾರಾವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗುಣಮುಖರಾಗಿದ್ದ ಅವರು ಮತ್ತೆ ಇಂದು ಅಸೌಖ್ಯರಾಗಿದ್ದರಿಂದ ಉಡುಪಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Click Here

Click here

Click Here

Call us

Visit Now

Click here

ಧರ್ಮಸ್ಥಳ ಮೇಳದ ಎರಡನೇ ಸ್ತ್ರೀ ವೇಷಧಾರಿಯಾಗಿದ್ದ ಶಶಿಧರ್ ಲಾಲಿತ್ಯಪೂರ್ಣ ಹೆಜ್ಜೆಗಾರಿಕೆ ಸ್ವರಬಾರ ಅಭಿನಯ ಛಾತುರ್ಯದಿಂದ ಬ್ರಮರಕುಂತಳೆ ತಾರಾವಳಿ ಪದ್ಮಗಂದಿ ಮುಂತಾದ ಪಾತ್ರಗಳಿಗೆ ಅದ್ಭುತ ನ್ಯಾಯ ಒದಗಿಸಿದ ಕಲಾವಿದ. ಈ ಹಿಂದೆ ಪೇರ್ಡೂರು ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದರು. ಶಶಿಧರ್ ಅವರ ಅಗಲುವಿಕೆ ಯಕ್ಷಾಭಿಮಾನಿಗಳನ್ನು ದಿಗ್ಬ್ರಾಂತರನ್ನಾಗಿಸಿದೆ. ಕೆಲವು ದಿನಗಳ ಹಿಂದಷ್ಟೆ ಕಣ್ಣಿಮನೆ ಅವರನ್ನು ಕಳೆದುಕೊಂಡಿದ್ದ ಯಕ್ಷಪ್ರಿಯರು ಈಗ ಮತ್ತೊಬ್ಬ ಉದಯೋನ್ಮಖ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Darmastala Mela Yakshagana Artist Shashidhar Padukone no more (1) Darmastala Mela Yakshagana Artist Shashidhar Padukone no more (2) Darmastala Mela Yakshagana Artist Shashidhar Padukone no more (3) Darmastala Mela Yakshagana Artist Shashidhar Padukone no more (4) Darmastala Mela Yakshagana Artist Shashidhar Padukone no more (5)

Leave a Reply

Your email address will not be published. Required fields are marked *

nineteen + four =