ಯಕ್ಷಗಾನ ಕಲಾವಿದ ಉಳ್ಳೂರು ಶಂಕರ ದೇವಾಡಿಗ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಸ್ವಂತಿಕೆಯಿಂದ ಪಾತ್ರಗಳಿಗೆ ಜೀವತುಂಬುವ ಸಹೃದಯಿ ಕಲಾವಿದ ಉಳ್ಳೂರು ಶಂಕರ ದೇವಾಡಿಗ ಅವರಿಗೆ ಹಟ್ಟಿಯಂಗಡಿ ಮೇಳ ಹಾಗೂ ಬೋಳಂಬಳ್ಳಿ ಮೇಳದ ಕಲಾವಿದರ ಪೋಷಣೆಗಾಗಿ ಹಮ್ಮಿಕೊಂಡ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಅರೆಹೊಳೆ ಕ್ರಾಸ್ ಮಾಲಸ ಮಾಂಗಲ್ಯ ಆರ್ಕೆಡ್ ನಲ್ಲಿ ನಾವುಂದ ಲಯನ್ಸ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮರವಂತೆ-ಬಡಾಕೆರೆ ವ್ಯ.ಸೇ.ಸ.ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಸನ್ಮಾನಿಸಿದರು. ಖಂಬದಕೋಣೆ ರೈ.ಸೇ.ಸ.ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಸ್ಥಾಪಕಾಧ್ಯಕ್ಷ ವಕ್ವಾಡಿ ಭಾಸ್ಕರ ಶೆಟ್ಟಿ ಸಮಾರೋಪ ಮಾತುಗಳನ್ನಾಡಿದರು,ಲಯನ್ಸ್ ಅಧ್ಯಕ್ಷ ನರಸಂಹ ದೇವಾಡಿಗ ಅತಿಥಿ ಸತ್ಕರಿಸಿದರು, ಮುಂಬಯಿ ಗೆಳೆಯರ ಸ್ವಾವಲಂಬನಾ ಕೇಂದ್ರದ ಅಧ್ಯಕ್ಷ ವೆಂಕಟೇಶ ಪೈ, ನಿವೃತ್ತ ಅಧ್ಯಾಪಕ ಸದಾಶಿವ ಶ್ಯಾನುಬೋಗ, ಬೈಂದೂರು ಕ್ಷೇ.ಶಿ.ಕಛೇರಿ ಸಮನ್ವಯಾಧಿಕಾರಿ ಅಬ್ದುಲ್ ರವೂಫ್, ಅಧ್ಯಾಪಕ ಕರುಣಾಕರ ಶೆಟ್ಟಿ, ಬೈಂದೂರು ಅರ್ಬನ್ ಕೋಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಮಣಿಕಂಠ ದೇವಾಡಿಗ, ಉದ್ಯಮಿಗಳಾಗ ಪ್ರದೀಪ್ ಶೆಟ್ಟಿ, ಸಮರ ಶೆಟ್ಟಿ, ಕೃಷ್ಣಾನಂದ ಕಾಮತ್ ಮುಂತಾದವರು ಉಪಸ್ಥಿತರಿದ್ದರು. ಲಯನ್ ನಿತ್ಯಾನಂದ ಆಚಾರಿ ಸ್ವಾಗತಿಸಿದರು. ಮೇಳಗಳ ಸಂಚಾಲಕ ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

3 × 3 =