ಯಶವಂತಪುರ–ಕಾರವಾರ ರೈಲು – ವಿಸ್ಟಾಡೋಮ್ ಕೋಚ್‌ಗೆ ಕುಂದಾಪುರದಲ್ಲಿ ಸ್ವಾಗತ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಆ.17:
ಯಶವಂತಪುರ–ಕಾರವಾರ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುವ ರೈಲು ಹೊಸ ವಿಸ್ಟಾಡೋಮ್ ಕೋಚ್ನೊಂದಿಗೆ ಸಂಚಾರಕ್ಕೆ ಆರಂಭಿಸಿದ್ದು ಕುಂದಾಪುರ ರೈಲು ನಿಲ್ದಾಣದಲ್ಲಿ ಸೋಮವಾರ ಸಾರ್ವಜನಿಕರು ಸ್ವಾಗತಿಸಿಕೊಂಡರು.

Call us

Call us

ಬೆಂಗಳೂರು ಯಶವಂತಪುರ–ಕಾರವಾರ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುವ ಈ ರೈಲು ಮೊದಲು ಮಂಗಳೂರು ಜಂಕ್ಷನ್ವರೆಗೆ ಮಾತ್ರ ಸಂಚರಿಸುತ್ತಿತ್ತು. ಇದೀಗ ಮತ್ತೆ ಕಾರವಾರದ ತನಕ ರೈಲು ಸಂಚಾರ ಪುನಾರಂಭವಾಗಿದೆ. 06211 ಸಂಖ್ಯೆ ರೈಲು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಯಶವಂತಪುರದಿಂದ ಕಾರವಾರಕ್ಕೆ ಹೊರಡಲಿದ್ದು, 06212 ರೈಲು ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಕಾರವಾರದಿಂದ ಯಶವಂತಪುರಕ್ಕೆ ಹೊರಡಲಿದೆ. ಪ್ರಕೃತಿಯ ರಮಣೀಯತೆ, ಪಶ್ಚಿಮ ಘಟ್ಟಗಳ ಸೊಬಗಿನ ನೋಟವನ್ನು ವಿಸ್ಟಾಡೋಮ್ ಕೋಚ್ನಲ್ಲಿ ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು. ನದಿಗಳು, ಬೆಟ್ಟಗುಡ್ಡಗಳು, ಕೃಷಿಭೂಮಿ, ತೊರೆಗಳು ಸಹಿತ ನಯನಮನೋಹರ ದೃಶ್ಯಗಳನ್ನು ಕರಾವಳಿಯಿಂದ ಯಶವಂತಪುರದ ತನಕವೂ ವೀಕ್ಷಿಸಬಹುದಾಗಿದೆ.

Call us

Call us

ಕುಂದಾಪುರಕ್ಕೆ ಆಗಮಿಸಿದ ವಿಸ್ಟಾಡೋಮ್ ಕೋಚನ್ನು ಕೊಂಕಣ ರೈಲ್ವೇ ವಿಭಾಗೀಯ ಅಧಿಕಾರಿ ಬಿ.ಬಿ ನಿಕ್ಕಂ ಬರಮಾಡಿಕೊಂಡು ಪ್ರಯಾಣಿಕರಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ರೈಲ್ವೇ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್, ಉಪಾಧ್ಯಕ್ಷ ರಾಜೇಶ್ ಕಾವೇರಿ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಸಂಚಾಲಕ ವಿವೇಕ್ ನಾಯಕ್, ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ, ಗೌರವ ಅಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ, ಸದಸ್ಯರಾದ ಕಿಶೋರ್ ಕುಮಾರ್, ಜಾಯ್ ಕರ್ವೆಲ್ಲೋ, ಶ್ರೀಧರ್ ಸುವರ್ಣ, ಉದಯ್ ಭಂಡಾರ್ಕರ್, ಪದ್ಮನಾಭ ಶೆಣೈ, ಧರ್ಮಪ್ರಕಾಶ್, ನಾಗರಾಜ ಆಚಾರ್, ರಾಘವೇಂದ್ರ ಶೇಟ್, ಮಹೇಶ್ ಶೆಣೈ, ಗೌರವ ಸಲಹೆಗಾರ ಎಚ್.ಎಸ್. ಹತ್ವಾರ್, ಮಾಜಿ ಜಿ.ಪಂ ಸದಸ್ಯ ಗಣಪತಿ ಟಿ. ಶ್ರೀಯಾನ್, ಕಂದಾವರ ಗ್ರಾ.ಪಂ ಅಧ್ಯಕ್ಷೆ ಬಾಬಿ, ಲಯನ್ಸ್ ಕ್ಲಬ್ ಅಮೃತಧಾರ ಕುಂದಾಪುರದ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಕಾರ್ಯದರ್ಶಿ ಜಯಶೀಲಾ ಕಾಮತ್, ರಾಷ್ಟ್ರ ಸೇವಿಕಾ ಕಾರ್ಯವಾಹ್ ಕಲ್ಪನಾ ಭಾಸ್ಕರ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್’ನ ಭರತ ಬಂಗೇರ, ಇದ್ದರು.

ಇದೆ ಸಂದರ್ಭ ರೈಲು ನಿಲ್ದಾಣದ ಎದುರಿನ ಹೈಮಾಸ್ಟ್ ವಿದ್ಯುತ್ ದೀಪವನ್ನು ಉದ್ಘಾಟಿಸಲಾಯಿತು. ರೈಲ್ವೇ ಅಧಿಕಾರಿಯನ್ನು ಹಿತರಕ್ಷಣಾ ಸಮಿತಿಯಿಂದ ಗೌರವಿಸಲಾಯಿತು.

Leave a Reply

Your email address will not be published. Required fields are marked *

14 + 11 =