ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ತನಗೆ ಕೈಕೊಟ್ಟಿದ್ದಾನೆ ಎಂದು ಪೊಲೀಸರು ಉಡುಪಿ ಮೆಸ್ಕಾಂ ಎಲ್.ಟಿ. ರೇಟಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕುಂದಾಪುರ ಮೂಲದ ರಾಕೇಶ್ ಎನ್ನುವನನ್ನು ಬಂಧಿಸಿದ್ದಾರೆ. ಕುಮಟಾದ ನಿವಾಸಿಯಾಗಿರುವ ಯುವತಿ ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ನೀಡಿದ್ದರು.
ಕುಮಟಾದಲ್ಲಿ ಸರಕಾರಿ ಅಧಿಕಾರಿಯಾಗಿದ್ದ ಕುಂದಾಪುರದ ರಾಕೇಶ್ ಅವರ ಪರಿಚಯ ಸ್ನೇಹವಾಗಿ, ಆ ಸ್ನೇಹ ಪ್ರೇಮಕ್ಕೆ ತಿರುಗಿತ್ತು ಹಾಗೂ ಅವರು ಮದುವೆಯಾಗುವ ಬಗ್ಗೆ ಭರವಸೆಯನ್ನು ನೀಡಿ ದೈಹಿಕ ಸಂಪರ್ಕ ಬೆಳಸಿದ್ದ ಆತ ನಂತರ ಕೈಕೊಟ್ಟಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಅನ್ವಯ ಆರೋಪಿಯ ವಿರುದ್ಧ 376 ಮತ್ತು 417 ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿಸಿ, ವೈದ್ಯಕೀಯ ತಪಾಸಣೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಸುಂಧರಾ ಅವರು ಅಮಾಸೆಬೈಲು ಠಾಣೆಯಲ್ಲಿ ದೂರು ನೀಡುತ್ತಿದ್ಧಂತೆ, ಪ್ರಕರಣ ಇನ್ನಷ್ಟು ತಿರುವುವನ್ನು ಪಡೆದುಕೊಂಡಿದ್ದು, ಮದುವೆಯ ಬಗ್ಗೆ ಅವರ ಮನೆಯವರ ನಡುವೆ ಮಾತುಕತೆ ನಡೆದಿತ್ತು. ಈ ಹಿನ್ನಲೆಯಲ್ಲಿ ಆರೋಪಿ ರಾಕೇಶ್ ಹಾಗೂ ಯುವತಿಯನ್ನು ಸಂಜೆ ಕುಂದಾಪುರ ವೃತ್ತ ನಿರೀಕ್ಷಕರ ಕಚೇರಿಗೆ ಕರೆಸಲಾಗಿತ್ತಾದರೂ ಕೊನೆ ಕ್ಷಣದಲ್ಲಿ ನಡೆದ ಈ ಪ್ರಯತ್ನಗಳು ವಿಫಲಗೊಂಡಿತ್ತು.