ಯುವ ಪರಿವರ್ತಕರ ಹುದ್ದೆ- ಅರ್ಜಿ ಆಹ್ವಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ ಎಪಿಡೀಮೀಯಾಲಜಿ ವಿಭಾಗ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರು (ನಿಮ್ಹಾನ್ಸ್) ಇವರ ಸಹಯೋಗದೊಂದಿಗೆ ಆರಂಭಿಸಲಾಗಿರುವ ಯುವ ಸ್ಪಂದನ ಕೇಂದ್ರದಲ್ಲಿ ಯುವ ಪರಿವರ್ತಕರಾಗಿ ಕಾರ್ಯನಿರ್ವಹಿಸಲಿಚ್ಛಿಸುವ 21 ರಿಂದ 35 ವರ್ಷದೊಳಗಿನ ಯುವಕ/ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

Call us

Call us

Visit Now

ಯುವ ಸ್ಪಂದನ ಕೇಂದ್ರದಲ್ಲಿ ಯುವ ಪರಿವರ್ತಕರಾಗಿ ಕಾರ್ಯನಿರ್ವಹಿಸುವವರು, ಯುವ ಜನರ ಪ್ರೌಢಾವಸ್ಥೆಯ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳು ಪರಿಹಾರ ಕಂಡುಕೊಳ್ಳುವ ಬಗ್ಗೆ ಸಾರ್ವಜನಿಕ ಅರಿವು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಶ್ರಮಿಸಬೇಕಾಗುತ್ತದೆ.

Click here

Call us

Call us

ಪದವಿ ತೇರ್ಗಡೆ ಹೊಂದಿದ ಆಸಕ್ತ ಯುವಕ- ಯುವತಿಯರು ತಮ್ಮ ಸ್ವ-ವಿವರಗಳೊಂದಿಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಇಲ್ಲಿಗೆ ಮೇ 9 ರ ಒಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯ ನಿವಾಸಿಗಳಾಗಿರಬೇಕು. ಕನ್ನಡ ಸ್ಪಷ್ಟವಾಗಿ ಮಾತನಾಡಲು ಮತ್ತು ಸಂವಹನ ಕಲೆ, ಕೌಶಲ್ಯ ಹೊಂದಿ ಸಮುದಾಯದಲ್ಲಿ ಕೆಲಸ ಮಾಡಲು ಇಚ್ಛೆ ಉಳ್ಳವರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರು(ನಿಮ್ಹಾನ್ಸ್) ಇಲ್ಲಿ ತರಬೇತಿ ನೀಡಲಾಗುವುದು. ಪದವಿ ಅಭ್ಯರ್ಥಿಗಳು ದೊರೆಯದೇ ಇದ್ದಲ್ಲಿ ಆಸಕ್ತಿ ಇರುವ ಪಿ.ಯು.ಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಯುವ ಸ್ಪಂದನ ಕೇಂದ್ರದ ಕ್ಷೇತ್ರ ಸಂಪರ್ಕಾಧಿಕಾರಿ ಧನರಾಜ್, ಮೊ.ನಂ: 6364814314 ಹಾಗೂ ಸಮಾಲೋಚಕರು ಶ್ಯಾಮಲ, ಮೊ.ನಂ: 9743292051 ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

16 − two =