ಯುವ ಪ್ರತಿಭೆ ಶೃದ್ಧಾ ಓಂಗಣೇಶ್ ಕಾಮತ್ ಅವರ ’ಭಜನ್ ಸಂಧ್ಯಾ’ಕ್ಕೆ ಮೆಚ್ಚುಗೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೆರ್ಗಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯ್ಕನಕಟ್ಟೆ ಜಿಎಸ್‌ಬಿ ಸಮಜದವರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ವೈಭವದಿಂದ ಜರುಗಿತು. ಬೆಳಿಗ್ಗೆ ಹೋಮ, ಹವನಾದಿಗಳು ಹಾಗೂ ಇತರ ಧಾರ್ಮಿಕ ಕಾರ್ಯಕ್ರಗಳು ನಡೆದವು. ಉತ್ಸವದ ಪ್ರಯುಕ್ತ ಸಂಜೆ ಶ್ರೀ ವೆಂಕಟರಮಣ ಸೇವಾ ಟ್ರಸ್ಟ್ ಆಯೋಜಿಸಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪ್ಪುಂದದ ಯುವಪ್ರತಿಭೆ ಶೃದ್ಧಾ ಓಂಗಣೇಶ್ ಕಾಮತ್ ಇವರಿಂದ ನಡೆದ ’ಭಜನ್ ಸಂಧ್ಯಾ’ ಮೆಚ್ಚುಗೆಗೆ ಪಾತ್ರವಾಯಿತು. ಹಾರ್ಮೋನೀಯಂನಲ್ಲಿ ಉಪ್ಪುಂದ ವಿನಾಯಕ ಪ್ರಭು, ತಬಲಾ ಸಾಥಿಯಾಗಿ ಉಪ್ಪುಂದ ಗೋಪಾಲಕೃಷ್ಣ ಜೋಷಿ ಹಾಗೂ ಮಿಶ್ರವಾದ್ಯದಲ್ಲಿ ವಿಠಲದಾಸ ಕಾಮತ್ ಮತ್ತು ವಿಜಯಾ ಓಂಗಣೇಶ್ ಸಹಕರಿಸಿದರು.

Call us

Call us

Call us

Leave a Reply

Your email address will not be published. Required fields are marked *

seventeen + seven =