ಕುಂದಾಪುರ: ಯಕ್ಷಗಾನ ಕ್ಷೇತ್ರದ ಉದಯೋನ್ಮುಕ ಕಲಾವಿದ, ಪ್ರಸಂಗ ಕರ್ತ ಕಾಲ್ತೋಡು ನಿವಾಸಿ ಚಂದ್ರಕಾಂತ ಶೆಟ್ಟಿ(30) ಜೀವನದಲ್ಲಿ ಜಿಗುಪ್ಸೆಗೊಂಡು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಮಡ ಘಟನೆ ಮಂಗಳವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಚಂದ್ರಕಾಂತ ಶೆಟ್ಟಿ ಕೆಲವು ವರ್ಷಗಳಿಂದ ಗೋಳಿಗರಡಿ ಹಾಗೂ ಸಿಗಂಧೂರು ಮೇಳದಲ್ಲಿಯೂ ಕಲಾವಿದರಾಗಿ ಸೇವೆ ಸಲ್ಲಿಸಿದವರೆನ್ನಲಾಗಿದ್ದು ಆಜ್ರಿಯ ಚೋನಮನೆ ಶ್ರೀ ಶನೀಶ್ವರ ಯಕ್ಷಗಾನ ಮೇಳದಲ್ಲಿಯೂ ಕಲಾವಿದರಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದರೆನ್ನಲಾಗಿದೆ. ಆದರೆ ಈ ಬಾರಿ ಸಿಗಂಧೂರು ಮೆಳದಲ್ಲಿಯೇ ಕಲಾವಿದರಾಗಿ ಮುಂದುವರೆದಿದ್ದರು ಎನ್ನಲಾಗಿದೆ.
ಸೋಮವಾರ ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಉಡುಪಿಗೆ ಬಂದಿದ್ದರೆನ್ನಲಾಗಿದ್ದು, ಮಂಗಳವಾರ ರಾತ್ರಿ ಇಂದ್ರಾಳಿ ಸಮೀಪ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಚಂದ್ರಕಾಂತ ಶೆಟ್ಟಿ ಯಕ್ಷಗಾನ ಪ್ರಸಂಗಕರ್ತರಾಗಿ ಕೆಲವು ಪ್ರಸಂಗಗಳನ್ನು ರಚಿಸಿದ್ದು, ವಿಪರೀತ ಕುಡಿತದ ಚಟಕ್ಕೆ ಬಲಿಯಾಗಿದ್ದರು ಎನ್ನಲಾಗಿದೆ. ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ