ಯೋಗಪಟು ಕುಶ ಪೂಜಾರಿಗೆ ಹುಟ್ಟೂರ ಅಭಿನಂದನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಕಳೆದ ವಾರ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ವಿಶ್ವ ಯೋಗಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮೂರನೆಯ ಸ್ಥಾನ ಗಳಿಸಿ ಕಂಚಿನ ಪದಕದಿಂದ ಪುರಸ್ಕೃತರಾಗಿರುವ ಕುಶ ಪೂಜಾರಿ ಶುಕ್ರವಾರ ಮರವಂತೆಗೆ ಬರುತ್ತಿದ್ದಂತೆ ಅವರಿಗೆ ಅದ್ದೂರಿಯ ಸ್ವಾಗತ ಕೋರಿ ಅಭಿನಂದಿಸಲಾಯಿತು.

Call us

Call us

ಗ್ರಾಮದ ದಕ್ಷಿಣ ಗಡಿಯಾದ ಮಾರಸ್ವಾಮಿಯಲ್ಲಿ ಕಾದಿದ್ದ ನಾಗರಿಕರ ಪರವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ. ಹಾರಾರ್ಪಣೆಗೈದರು. ಬಳಿಕ ಅವರನ್ನು ತೆರೆದ ವಾಹನದಲ್ಲಿ ಡಿಜೆ ಸಂಗೀತ, ಸಿಡಿಮದ್ದಿನ ಸದ್ದಿನೊಂದಿಗೆ ಊರಿನ ಪ್ರಮುಖ ಮಾರ್ಗಗಳಲ್ಲಿ ವಾಹನಗಳ ಮೆರವಣಿಗೆಯ ಮೂಲಕ ಅವರು ಪ್ರಾಥಮಿಕ ಶಿಕ್ಷಣ ಮತ್ತು ಯೋಗದ ಆರಂಭಿಕ ಪಾಠ ಕಲಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನಾ ಮಂಟಪಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಜಯಘೋಷದ ನಡುವೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಜನಾರ್ದನ ಅವರನ್ನು ಸನ್ಮಾನಿಸಿದರು.

Call us

Call us

ಮಾತನಾಡಿದ ಅವರು ಎಳವೆಯಲ್ಲೇ ಯೋಗದತ್ತ ಆಕರ್ಷಿತರಾದ ಕುಶ ತಮ್ಮ ಶಿಕ್ಷಣದುದ್ದಕ್ಕೂ ಸತತ ಪರಿಶ್ರಮದಿಂದ ಅದರಲ್ಲಿ ಹಂತಹಂತವಾಗಿ ಪರಿಣತಿ ಗಳಿಸುತ್ತಲೇ ಸಾಗಿದರು. ಈಗ ವಿಶ್ವಮಟ್ಟ ಸಾಧನೆ ಅವರಿಂದಾಗಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗದಲ್ಲಿ ಎಂ. ಎಸ್ಸಿ ಅಧ್ಯಯನನಡೆಉತ್ತಿರುವ ಅವರು ಇನ್ನಷ್ಟು ಉನ್ನತ ಸಾಧನೆ ಮಾಡಲಿ ಎಂದು ಹಾರೈಸಿದರು. ಶಾಲೆ, ವಿವಿಧ ಸಂಘಸಂಸ್ಥೆಗಳು, ವ್ಯಕ್ತಿಗಳು ಅವರಿಗೆ ಹಾರಹಾಕಿ ಗೌರವಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ಎಂ, ನರಸಿಂಹ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಪೂಜಾರಿ, ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಪ್ರಮುಖರಾದ ಎಂ. ಅಣ್ಣಪ್ಪ ಬಿಲ್ಲವ, ಎಂ. ಶಂಕರ ಬಿಲ್ಲವ, ಯೋಗೀಶ ಆಚಾರ್ಯ, ರಾಘವೇಂದ್ರ ಆಚಾರ್ಯ, ಕೃಷ್ಣಯ್ಯ ಆಚಾರ್ಯ, ನಾಗರಾಜ ಖಾರ್ವಿ, ದಯಾನಂದ ಬಳೆಗಾರ್, ರಾಜು ಗಾಂಧಿನಗರ, ಶಾಲಾ ಮತ್ತು ಕಾಲೇಜು ಹಂತದಲ್ಲಿ ಕುಶ ಅವರಿಗೆ ಯೋಗ ಶಿಕ್ಷಣ ನೀಡಿದ್ದ ಎಂ. ವಿ. ಲಮಾಣಿ, ಡಾ. ಯಶೋಧಾ ಕರನಿಂಗ, ರಂಜಿತ್ ಟಿ. ಎಸ್, ಇತರರು ಇದ್ದರು. ಕರುಣಾಕರ ಆಚಾರ್ಯ ನಿರೂಪಿಸಿದರು.

Leave a Reply

Your email address will not be published. Required fields are marked *

five × 5 =