ಯೋಗೀಶ ಬಂಕೇಶ್ವರ ಅವರಿಗೆ ಸಿಜಿಕೆ ರಂಗ ಪುರಸ್ಕಾರ ಪ್ರದಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಮುದ್ರಾಡಿಯ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯು ಸಿಜಿಕೆ ಬೀದಿರಂಗ ದಿನದ ನೆನಪಿನಲ್ಲಿ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಸ್ಥಳೀಯ ನಟ, ನಿರ್ದೇಶಕ ಯೋಗೀಶ ಬಂಕೇಶ್ವರ ಅವರಿಗೆ ಪುರಸ್ಕಾರ ಪ್ರದಾನ ಕಾರ್ಯಕ್ರಮ ಜರುಗಿತು.

Call us

Call us

Visit Now

ಸಿಜಿಕೆ ರಂಗ ಪುರಸ್ಕಾರ ಪ್ರದಾನ ಮಾಡಿದ ಹಿರಿಯ ರಂಗನಿರ್ದೇಶಕ ಗುರುರಾಜ ಮಾರ್ಪಳ್ಳಿ ಮಾತನಾಡಿ ರಂಗಭೂಮಿಯು ಎಲ್ಲ ಕಲೆಗಳ ತವರು. ಅದರಲ್ಲೂ ನವ್ಯ ರಂಗಭೂಮಿ ಹೊಸರೀತಿಯ ಚಿಂತನೆಗೆ, ಸೃಜನಶೀಲ ಕ್ರಿಯೆಗೆ ಸೂಕ್ತ ವೇದಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ರಂಗಭೂಮಿಗೆ ಸಾಕಷ್ಟು ಬೇಡಿಕೆಯಿದ್ದು, ಇದು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

Click here

Call us

Call us

ರಂಗಭೂಮಿ ಮನುಷ್ಯ ಜೀವನದ ಅರ್ಥ, ಗುರಿ ಏನು ಎನ್ನುವುದನ್ನು ಶೋಧಿಸಿ, ಪ್ರಚುರಪಡಿಸುವ ಕೆಲಸ ಮಾಡುತ್ತದೆ. ಅದರಲ್ಲಿ ತೊಡಗಲು ಮನಸ್ಸು ಇರುವವರಿಗೆಲ್ಲ ಇಂದು ವಿಪುಲ ಅವಕಾಶಗಳಿವೆ. ಆಸಕ್ತ ವಿದ್ಯಾರ್ಥಿಗಳು ಅದರತ್ತ ಗಮನ ಹರಿಸಬೇಕು ಎಂದ ಅವರು ಯೋಗೀಶ ಬಂಕೇಶ್ವರ ಒಬ್ಬ ಪ್ರತಿಭಾವಂತ ಮತ್ತು ಕ್ರಿಯಾಶೀಲ ರಂಗಕರ್ಮಿ ಆಗಿರುವುದರಿಂದ ಅವರು ಸಿಜಿಕೆ ರಂಗ ಪುರಸ್ಕಾರಕ್ಕೆ ಎಲ್ಲ ವಿಧದಿಂದಲೂ ಅರ್ಹರು ಎಂದರು.

ಕರ್ನಾಟಕ ಬೀದಿನಾಟಕ ಅಕಾಡೆಮಿಯ ಸಹಕಾರದಲ್ಲಿ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ಪೂಜಾರಿ ಉದ್ಘಾಟಿಸಿದರು.

ಅತಿಥಿಗಳಲ್ಲಿ ಒಬ್ಬರಾಗಿದ್ದ ರಾಜ್ಯ ನಾಟಕ ಅಕಾಡೆಮಿಯ ಸದಸ್ಯ ಬಾಸುಮ ಕೊಡಗು ಮಾತನಾಡಿ, ರಂಗ ಶಿಕ್ಷಣದಲ್ಲಿ ನಾಟಕ ಕಲೆ ಒಂದು ಭಾಗ ಮಾತ್ರ. ಅದರ ಉಳಿದ ಅಂಗಗಳು ಅದರಲ್ಲಿ ತೊಡಗುವವರಿಗೆ ಬದುಕಿಗೆ ಅಗತ್ಯವಿರುವ ಹಲವು ಕೌಶಲಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಇದರಲ್ಲಿ ತೊಡಗಿಕೊಳ್ಳುವ ಮೂಲಕ ನಾಲ್ಕು ಗೋಡೆಗಳ ನಡುವಿನ ಕಲಿಕೆಯ ಜತೆಗೆ ಅಂತಹ ಸೃಜನಶೀಲತೆಯ ಕಲಿಕೆಯೂ ಸಾಧ್ಯವಾಗುತ್ತದೆ ಎಂದರು.

ಪ್ರಾಂಶುಪಾಲ ಬಿ. ಎ. ಮೇಳಿ, ಕಲಾವಿದ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ನಾಗರಾಜ ಶೆಟ್ಟಿ ಸ್ವಾಗತಿಸಿ, ನಮ ತುಳುವೆರ್ ಕಲಾಸಂಘಟನೆಯ ಅಧ್ಯಕ್ಷ ಸುಕುಮಾರ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ನವೀನ್ ಎಸ್. ಜಿ. ವಂದಿಸಿದರು. ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ನಿರೂಪಿಸಿದರು. ಕೊನೆಯಲ್ಲಿ ಕಟಪಾಡಿಯ ಗಾನ ಪಲ್ಲವಿ ತಂಡದ ಸದಸ್ಯರಾದ ಪಲ್ಲವಿ, ದೃಶ್ಯ, ಕಾವ್ಯವಾಣಿ ರಂಗ ಗೀತೆಗಳನ್ನು ಹಾಡಿದರು.

 

Leave a Reply

Your email address will not be published. Required fields are marked *

five × five =