ರಂಗಕರ್ಮಿ ಯೋಗೀಶ್ ಬಂಕೇಶ್ವರ್‌ಗೆ ಸಿಜಿಕೆ ರಂಗ ಪುರಸ್ಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಭಾನ್ವಿತ ಕಲಾವಿದ, ನಿರ್ದೇಶಕ ಬೈಂದೂರಿನ ಯೊಗೀಶ್ ಬಂಕೇಶ್ವರ್ ಅವರು ಪ್ರಸಕ್ತ ಸಾಲಿನ ಸಿಜಿಕೆ ರಂಗ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮುದ್ರಾಡಿಯ ನಮ್ಮ ತುಳುವೆರ್ ಕಲಾ ಸಂಘಟನೆ ಸಿಜಿಕೆ ಬೀದಿರಂಗದ ನೆನಪಿನಲ್ಲಿ ಪ್ರಶಸ್ತಿ ನೀಡುತ್ತಿದ್ದು, ಜೂನ್ 27ರಂದು ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕಳೆದ 26 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಯೋಗೀಶ್ ಅವರು ಪುಷ್ಪರಾಣಿ, ಬದುಕಿಲ್ಲದವನ ಭಾವಗೀತೆ, ಮುದ್ದಣ್ಣನ ಪ್ರಮೋಶನ್ ಪ್ರಸಂಗ, ನಮ್ಮನಿಮ್ಮೊಳಗೊಬ್ಬ ಸೇರಿದಂತೆ ಸುಮಾರು 12 ನಾಟಕಗಳ ನಿರ್ದೇಶನ ಮಾಡಿದ್ದಾರೆ. 3 ಬಾರಿ ರಾಜ್ಯಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ. ದೃಷ್ಟಿ, ಮರಣ ಮೃದಂಗ, ಪೊಲೀಸ್, ಕಾವ್ಯರಂಗ, ಕಥಾಸಂಗಮ ಸೇರಿದಂತೆ 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. 13 ಧಾರಾವಾಹಿ, 6 ಕನ್ನಡ ಸಿನಿಮಾದಲ್ಲಿ ಪೋಷಕ ಹಾಗೂ ಒಂದು ತುಳು ಕಲಾತ್ಮಕ ಚಲನಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.

ಹಂಬಲ ಥಿಯೇಟರ್‌ನ ಮೂಲಕ ಕೋಮು ಸಾಮರಸ್ಯದ ಆಶಯವನ್ನಿಟ್ಟು ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹುತಾತ್ಮ ಭಗತ್ ಸಿಂಗ್ ಕಥೆ ಹೇಳುವುದು, ಜೊತೆಗೆ ಹಳ್ಳಿ ಶಾಲಾ ಮಕ್ಕಳಿಗೆ ಪ್ರತಿ ತಿಂಗಳಿಗೆ ಒಂದು ದಿನದ ರಂಗತರಬೇತಿ ನೀಡುವುದು ಮೊದಲಾದ ರಂಗ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

13 + twelve =