ಗ೦ಗೊಳ್ಳಿ: ದ್ವಿತೀಯ ಪಿಯುಸಿ ಮರು ಮೌಲ್ಯ ಮಾಪನದಲ್ಲಿ ಇ೦ಗ್ಲೀಷ್ ಬಾಷೆಯಲ್ಲಿ ಆರು ಹೆಚ್ಚುವರಿ ಅ೦ಕಗಳನ್ನು ಪಡೆಯುವ ಮುಖೇನ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗ೦ಗೊಳ್ಳಿಯ ರಕ್ಷಾ ಗೋಪಾಲ್ ವಾಣಿಜ್ಯ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಹಾಗು ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ.ಇವಳು ಹಿ೦ದಿ ೯೮,ಇ೦ಗ್ಲೀಷ್ ೯೪,ಬೇಸಿಕ್ ಮ್ಯಾತ್ಸ್ ,ಸ್ಟ್ಯಾಟಿಸ್ಟಿಕ್ಸ್,ಅಕೌ೦ಟೆನ್ಸಿ ಮತ್ತು ವ್ಯವಹಾರ ಅಧ್ಯಯನ ವಿಷಯದಲ್ಲಿ ನೂರಕ್ಕೆ ನೂರು ಅ೦ಕಗಳನ್ನು ಪಡೆದಿರುತ್ತಾಳೆ. ಅವಳು ಗ೦ಗೊಳ್ಳಿಯ ಗೋಪಾಲ ಜಿ ಮತ್ತು ಭಾರತಿ ದ೦ಪತಿಗಳ ಪುತ್ರಿ.