ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೀದರ್ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ ೫೩ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಉತ್ತರಪ್ರದೇಶದ ಮಥುರಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ೯ ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಬಾಲಕಿಯರ ೧೬ ವಯೋಮಿತಿಯಲ್ಲಿ ದೀಪಾಶ್ರೀ ೩ನೇ ಸ್ಥಾನ, ೧೮ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಮಾಲಾಶ್ರೀ ೪ನೇ ಸ್ಥಾನ, ಚೈತ್ರಾ ಪಿ. ೫ನೇ ಸ್ಥಾನ, ಸಂಧ್ಯಾ ೭ನೇ ಸ್ಥಾನ, ರಕ್ಷಿತಾ ೧೦ನೇ ಸ್ಥಾನ, ೧೮ ವಯೋಮಿತಿ ಬಾಲಕರ ವಿಭಾಗದಲ್ಲಿ ಅಸ್ಲಾಮ್ ಮುಲ್ತಾನಿ ೨ನೇ ಸ್ಥಾನ, ಸತೀಶ್ ೭ನೇ ಸ್ಥಾನ.

೨೦ ವಯೋಮಿತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಚೈತ್ರಾ ಡಿ. ಪ್ರಥಮ ಸ್ಥಾನ, ಪ್ರಿಯಾ ಎಲ್.ಡಿ ೩ನೇ ಸ್ಥಾನ, ಜಯಲಕ್ಷ್ಮೀ ೯ನೇ ಸ್ಥಾನ, ರೇಷ್ಮಾ ೧೦ನೇ ಸ್ಥಾನ, ಪುರುಷರ ವಿಭಾಗದಲ್ಲಿ ರಂಜಿತ್ ಸಿಂಗ್ ಪ್ರಥಮ ಸ್ಥಾನ, ಅನಿಲ್ ೯ನೇ ಸ್ಥಾನ, ಪ್ರವೀಣ್ ೧೦ನೇ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಶಾಲಿನಿ ೩ನೇ ಸ್ಥಾನ, ದೀಕ್ಷಾ ೪ನೇ ಸ್ಥಾನ, ಅರ್ಪಿತಾ ೫ನೇ ಸ್ಥಾನ, ಪಡೆಯುವುದರೊಂದಿಗೆ ಮಹಿಳೆಯರ, ೨೦ ವಯೋಮಿತಿಯ ಬಾಲಕಿಯರ, ೧೮ ವಯೋಮಿತಿಯ ಬಾಲಕಿಯರ ತಂಡ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

Leave a Reply

Your email address will not be published. Required fields are marked *

9 − eight =