ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಕಿಶೋರ್ ಶೆಟ್ಟಿ ಮತ್ತು ಸಚಿನ್ ಶೆಟ್ಟಿ ಸ್ಮರಣಾರ್ಥ ಕುಂದಾಪುರದ ಓಂ ಫ್ರೆಂಡ್ಸ್ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಸಿದ್ದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮರವಂತೆಯ ಗುರುರಾಜ ಬಿಲ್ಲವ ಮತ್ತು ಕುಂದಾಪುರದ ಚೈತ್ರಾ ಜೋಡಿ ಮೊದಲ ಸ್ಥಾನ ಗಳಿಸಿ ನಗದು 20,000 ಮತ್ತು ಪಾರಿತೋಷಕ ಹಾಗೂ ದ್ವಿತೀಯ ಬಹುಮಾನ 10,000 ಮತ್ತು ಪಾರಿತೋಷಕವನ್ನು ತೆಂಕನಿಡಿಯೂರಿನ ಶಾಲಿನಿ ಶೆಟ್ಟಿ ಮತ್ತು ಚೇರ್ಕಾಡಿಯ ಪ್ರಜೇಶ ನಾಯ್ಕ್ ಜೋಡಿ ಪಡೆಯಿತು.
ಮೊದಲ ಹಂತದ ಸ್ಪರ್ಧೆಯಲ್ಲಿ ಅಂಕ ಗಳಿಕೆಯ ಆಧಾರದಲ್ಲಿ ಮೊದಲ ಐವರು ಪುರುಷರನ್ನು ಮತ್ತು ಐವರು ಮಹಿಳೆಯರನ್ನು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಮಾಡಲಾಗಿತ್ತು, ಅವರನ್ನು ತಲಾ ಒಬ್ಬ ಪುರುಷ ಹಾಗೂ ಮಹಿಳೆ ಇರುವ ಐದು ತಂಡಗಳಾಗಿ ಮಾಡಿ ಅಂತಿಮ ಸ್ಪರ್ಧೆ ನಡೆಸಲಾಯಿತು.
ಭಾನುವಾರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ ಮಲ್ಲಿ ಬಹುಮಾನ ವಿತರಿಸಿದರು. ತೆಕ್ಕಟ್ಟೆಯ ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಕೋಟ ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಾಯ ಆಚಾರ್ಯ, ಓಂ ಫ್ರೆಂಡ್ಸ್ನ ಪದಾಧಿಕಾರಿಗಳು ಇದ್ದರು.
ಇದೇ ಸಂದರ್ಭ ಮಾಜಿ ಸೈನಿಕರನ್ನು, ಹೊಸದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿ ಆಯ್ಕೆಯಾದರನ್ನು ಸನ್ಮಾನಿಸಲಾಯಿತು.