ರಾಜ್ಯ ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಮಂಜುನಾಥ ಶೆಟ್ಟಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಚುನಾಯಿಸಲು ಡಿ.೨೫ ರಂದು ನಿಗದಿಯಾಗಿರುವ ಚುನಾವಣೆಗೆ ಈ ಕೆಳಕಂಡ ಅಭ್ಯರ್ಥಿಗಳು ಚುನಾವಣಾ ದಿನಾಂಕದಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಉಡುಪಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆಯಾದರು.

ಮಂಜುನಾಥ ಪಿ.ಶೆಟ್ಟಿ (ಅಧ್ಯಕ್ಷರು), ಮಹಿಮ ಶೆಟ್ಟಿ ಕೆ (ಉಪಾಧ್ಯಕ್ಷರು), ರಾಜೇಶ್ವರಿ ಎನ್ (ಉಪಾಧ್ಯಕ್ಷರು-ಮಹಿಳೆ), ಮಹೇಶ್ ಕೆ (ಸಂಘಟನಾ ಕಾರ್ಯದರ್ಶಿ), ಪ್ರಮೀಳಾ ನಾಯಕ್ (ಸಂಘಟನಾ ಕಾರ್ಯದರ್ಶಿ-ಮಹಿಳೆ), ಗಿರೀಶ್ ಕುಮಾರ್ ಶೆಟ್ಟಿ (ಕ್ರೀಡಾ ಕಾರ್ಯದರ್ಶಿ), ಫರ್ಜಾನ ಎಂ (ಸಾಂಸ್ಕೃತಿಕ ಕಾರ್ಯದರ್ಶಿ-ಮಹಿಳೆ), ಸತೀಶ್ (ಖಜಾಂಜಿ), ದಯಾನಂದ ಬೆನ್ನೂರ (ರಾಜ್ಯ ಪರಿಷತ್ ಸದಸ್ಯ), ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಚುನಾವಣಾಧಿಕಾರಿ/ ಸಹಾಯಕ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

seven + 2 =