ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಇತ್ತೀಚಿಗೆ ಆಯೋಜಿಸಿದ 18ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯ ಕಟಾ ಮತ್ತು ಫೈಟಿಂಗ್, (ಕುಮೆಟಿ) ವಿಭಾಗದಲ್ಲಿ ಅನನ್ಯ ಎಸ್ ಪುರಾಣಿಕ್ ಪ್ರಥಮ ಮತ್ತು ತೃತೀಯ ಸ್ಥಾನಗಳಿಸಿ ಚಿನ್ನದ ಹಾಗೂ ಕಂಚಿನ ಪದಕ ಪಡೆದುಕೊಂಡಿದ್ದಾರೆ
ಅವರು, ನಾಗೂರು ಸಂದೀಪನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದು. ಉಪ್ಪುಂದ ಸೀತಾರಾಮ್ ಪುರಾಣಿಕ್ ಮತ್ತು ಉಷಾ ಪುರಾಣಿಕ್ ರವರ ಪುತ್ರಿ . ಉಪ್ಪುಂದ ಕರಾಟೆ ಶಿಕ್ಷಕ ವಿಶ್ವನಾಥ್ ದೇವಾಡಿಗ ಅವರಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ.