ರಾಜ್ಯ ಮಟ್ಟದ ಕೊರಗರ ಕ್ರೀಡಾಕೂಟ: ಒಟ್ಟಾಮ್ ಬಲ್ಲಾ 2021 ಸಮಾರೋಪ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಪರಿಶಿಷ್ಟ ಗೆಳೆಯರು(ಕೊರಗ), ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ದಕ್ಷಣ ಕನ್ನಡ ಜಿಲ್ಲೆ, ಕೆಳಪೇಟೆ ಶಿರೂರು, ಬೈಂದೂರು ತಾಲೂಕು ಮಹಾತ್ಮ ಜ್ಯೋತಿ ಬಾಪುಲೆ ಕೊರಗರ ಯುವ ಕಲಾ ವೇದಿಕೆ ಯೋಜನ ನಗರ ಬೈಂದೂರು ಇವರ ಸಹಕಾರದೊಂದಿಗೆ ರಾಜ್ಯ ಮಟ್ಟದ ಕೊರಗರ ಕ್ರೀಡಾಕೂಟ ಒಟ್ಟಾಮ್ ಬಲ್ಲಾ(ಒಂದಾಗೋಣ ಬನ್ನಿ) 2021 ಸಮಾರೋಪ ಸಮಾರಂಭ ನಡೆಯಿತು.

Click Here

Call us

Call us

ಅಧ್ಯಕ್ಷತೆ ವಹಿಸಿ ಮಾತನಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಶೆಟ್ಟಿ, ಕೊರಗರು ಅತ್ಯಂತ ಹಿಂದುಳಿದ ಪಂಗಡದವರಾಗಿದ್ದಾರೆ. ನಾವು ಬಾಲ್ಯದಿಂದಲೇ ಈ ಪಂಗಡವನ್ನು ಅತೀ ಹತ್ತಿರದಿಂದ ನೋಡಿದ್ದೇವೆ ಇವರಿಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ನಾವು ಅವರ ಅಭಿವೃದ್ಧಿ ಕೆಲಸವನ್ನು ಮಾಡುತ್ತೇವೆ ಮತ್ತು ಬಹಳ ಅಚ್ಚುಕಟ್ಟಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ. ಈ ಆಯೋಜನೆಯು ಬೇರೆ ಬೇರೆ ಸಮುದಾಯದವರಿಗೂ ಕೂಡ ಮಾದರಿಯಾಗಿದೆ ಎಂದು ಹೇಳಿದರು.

Click here

Click Here

Call us

Visit Now

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬು ಕೊರಗ ಮತ್ತು ಕುಂದಾಪುರ ಪುರಸಭೆಯ ಸದಸ್ಯರು ಮತ್ತು ಕರ್ನಾಟಕ ರಾಜ್ಯ ದಲಿತ ಸಂಘ ಸಮಿತಿಯ ಸಂಚಾಲಕರಾದ ವಿ. ಪ್ರಭಾಕರ ಇವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಉತ್ತರ ಕನ್ನಡ ಜಲ್ಲಾ ಕೊರಗ ಸಮಾಜದ ಹಿತ ರಕ್ಷಾಣಾ ವೇದಿಕೆ ಕುಮಟಾ ಅಧ್ಯಕ್ಷರಾದ ಮಂಜುನಾಥ ಡಿ. ಹೊನ್ನಾವರ, ಕುಂದಾಪುರ ಕೊರಗ ಯೋಜನಾಭಿವೃದ್ಧಿ ಅಧ್ಯಕ್ಷರಾದ ಗಣೆಶ್, ಬಾರ್ಕೂರು ಯುವ ಕಲಾವೇದಿಕೆ ಅಧ್ಯಕ್ಷರಾದ ಗಣೇಶ್ ಬಾರ್ಕೂರು, ಮಾಜಿ ಕೆ. ಎಮ್. ಫ್ ನಿರ್ದೇಶಕರಾದ ಕುಮಾರ್ ದಾಸ ಹಾಗೂ ಕುಂದಾಪುರ ಬಿಜೆಪಿ ಮಂಡಲ, ಎಸ್ಸ್. ಟಿ ಪ್ರಧಾನ ಕಾರ್ಯದರ್ಶಿ, ಕೊರಗ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ನಾಯಕರಾದ ವಿ. ಗಣೆಶ್, ಮಂಜುನಾಥ ಡಿ. ಹೊನ್ನಾವರ, ಲಕ್ಷಣ ಕೊರಗ ಬೈಂದೂರು ಇವರಿಗೆ ಮಹಾ ನಾಯಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Call us

ಈ ಸಂದರ್ಭದಲ್ಲಿ ಕೋರೋನಾ ವಾರಿಯರ್ಸ್‌ಗಳಾದ ಕಮಲಾ, ಸುವರ್ಣ, ಉಮೇಶ, ರಾಜೇಶ್, ಹರೀಶ್, ವಿಷ್ಣು, ಶಂಕರ, ಭೂಮಿಕಾ, ಶಶಿಧರ್, ಅರ್ಜುನ, ಪ್ರತಾಪ, ಜಯರಾಮ್, ಸುಮಲತಾ, ವೆಂಕಟೇಶ್ ಎಸ್., ಶ್ರೀಧರ ಕೆ. ರಜನಿ ಎಸ್ ಇವರನ್ನು ಸನ್ಮಾನಿಸಲಾಯಿತು.

ಈ ಪಂದ್ಯಾಟದ ಪ್ರಥಮ ಸ್ಥಾನವನ್ನು ಅರುಣ್ ವಿಠ್ಠಲ್ ಮತ್ತು ಪ್ರವೀಣ್ ವಿಠ್ಠಲ್ ಮಾಲಿಕತ್ವದ ಎಸ್.ಎನ್.ಸಿ ಕಾರವಾರ ತಂಡವು ಪಡೆದುಕೊಂಡರೆ, ದ್ವೀತಿಯ ಸ್ಥಾನವನ್ನು ಪ್ರಕಾಶ್ ಬಿದ್ಕಲ್‌ಕಟ್ಟೆ ಮಾಲಿಕತ್ವದ ರಾಯಲ್ ಕ್ರಿಕೆಟರ್ಸ್ ಬಿದ್ಕಲ್‌ಕಟ್ಟೆ ತಂಡವು ಪಡೆದುಕೊಂಡಿತು. ಆರೆಂಜ್ ಕ್ಯಾಪ್ ಪ್ರಶಸ್ತಿಯನ್ನು ಎಸ್.ಎನ್.ಸಿ ಕಾರವಾರ ತಂಡದ ಸುನೀಲ್ ಬಾಬು ಪಡೆದುಕೊಂಡರೆ, ಪರ್ಪಲ್ ಕ್ಯಾಪ್ ಪ್ರಶಸ್ತಿಯನ್ನು ರಾಯಲ್ ಕ್ರಿಕೆಟರ್ಸ್ ಬಿದ್ಕಲ್‌ಕಟ್ಟೆ ತಂಡದ ಅವಿನಾಶ್ ಪಡೆದುಕೊಂಡರು. ಉತ್ತಮ ಕ್ಷೇತ್ರ ರಕ್ಷಕ, ಪೈನಲ್ ಪಂದ್ಯದ ಪಂದ್ಯ ಶ್ರೇಷ್ಠನಾಗಿ ಎಸ್.ಎನ್.ಸಿ ತಂಡದ ಕಿಶನ್ಪಡೆದುಕೊಂಡರೆ, ಉತ್ತಮ ಗೂಟ ರಕ್ಷಕನಾಗಿ ರಾಯಲ್ ಕ್ರಿಕೆಟರ್ಸ್ ತಂಡದ ಅಮಿತ್ ಪಡೆದುಕೊಂಡರು.

ಈ ಕಾರ್ಯಕ್ರಮವನ್ನು ಸುರೇಂದ್ರ ಜಿ. ಮುರ್ಡೇಶ್ವರ, ಪ್ರವೀಣ್ ಸಾಣಿಕಟ್ಟಾ, ನಾಗರಾಜ್ ಶೇಡಗೇರಿ, ವಿನೋದ ಶಿರೂರು ಇತರರು ಸಂಘಟಿಸಿದರು, ಲಕ್ಷಣ ಕೊರಗ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಶೇಖರ ಮರವಂತೆ ವಂದಿಸಿದರು ಕುಮಾರಿ ಕೀರ್ತಿ ಭಟ್ ಉಪ್ಪುಂದ ನಿರೂಪಿಸಿದರು .

Leave a Reply

Your email address will not be published. Required fields are marked *

20 + one =