ರಾಜ್ಯ ವೃತ್ತಿಪರ ಶಿಕ್ಷಣ ಪದವೀಧರರ ಸಂಘ ರಾಜ್ಯ ಸಮಾವೇಶ ಉದ್ಘಾಟನೆ

Click Here

Call us

Call us

ಪದವೀಧರರ ಬೇಡಿಕೆ ಈಡೇರಿಕೆಗೆ ಪ್ರಯತ್ನ: ಸಚಿವ ಕಿಮ್ಮನೆ

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ
ಶಿವಮೊಗ್ಗ: ಕರ್ನಾಟಕ ರಾಜ್ಯದಲ್ಲಿನ ಡಿ.ಇಡಿ., ಬಿ.ಇಡಿ., ಬಿ.ಪಿ.ಇಡಿ., ಎಂ.ಇಡಿ. ಎಂ.ಪಿ.ಇಡಿ. ಮುಂತಾದ ಶಿಕ್ಷಣ ಪದವೀಧರರ ನಿರುದ್ಯೋಗ ಮತ್ತು ಅಭದ್ರತೆ ನಿವಾರಣೆಗೆ ಕ್ರಮ, ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕ ಹುದ್ದೆ ಭರ್ತಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಹುದ್ದೆ ಭರ್ತಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನೇಮಿಸಿಕೊಂಡ ೩೦ ಸಾವಿರ ಅತಿಥಿ ಶಿಕ್ಷಕರಿಗೆ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ರೂ. ೧೩೬೫೦ ವೇತನ ಮತ್ತು ಪಿ.ಎಫ್. ಹಾಗೂ ಇ.ಎಸ್.ಐ. ವ್ಯವಸ್ಥೆ ಜಾರಿ, ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸರಕಾರದ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ, ಡಿ.ಇಡಿ., ಬಿ.ಇಡಿ. ಹಾಗೂ ಎಂ.ಇಡಿ. ಪದವೀಧರ ಶಿಕ್ಷಕರಿಗೆ ಉದ್ಯೋಗ ಭದ್ರತೆ ಅಥವಾ ನಿರುದ್ಯೋಗ ಭತ್ಯೆ ನೀಡಿಕೆ ಸೇರಿದಂತೆ ಹಲವು ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಗೂ ರಾಜ್ಯದ ಪದವೀಧರರ ಸರ್ವಾಂಗೀಣ ಅಭ್ಯುದಯದ ಧ್ಯೇಯದೊಂದಿಗೆ ಹುಟ್ಟಿಕೊಂಡ ಕರ್ನಾಟಕ ರಾಜ್ಯ ವೃತ್ತಿಪರ ಶಿಕ್ಷಣ ಪದವೀಧರರ ಸಂಘ (ರಿ.) ಇದರ ಪ್ರಥಮ ಸಂಸ್ಥಾಪನಾ ರಾಜ್ಯ ಸಮಾವೇಶ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜರಗಿತು.

Click Here

Click here

Click Here

Call us

Call us

ಸಮಾವೇಶವನ್ನು ಉದ್ಘಾಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು, ವೃತ್ತಿಪರ ಶಿಕ್ಷಣ ಪದವೀಧರರ ಬೇಡಿಕೆಗಳ ಕುರಿತಾದ ಮನವಿಯನ್ನು ಸ್ವೀಕರಿಸಿ ಮಾತನಾಡಿ ರಾಜ್ಯದ ವೃತ್ತಿಪರ ಶಿಕ್ಷಣ ಪದವೀಧರರ ಬೇಡಿಕೆ ಹಾಗೂ ಸಮಸ್ಯೆಗಳಿಗೆ ಸರಕಾರ ಪ್ರಾಮಾಣಿಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಸೂಕ್ತ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ ಡಿ.ಇಡಿ., ಬಿ.ಇಡಿ., ಬಿ.ಪಿ.ಇಡಿ., ಎಂ.ಇಡಿ. ಎಂ.ಪಿ.ಇಡಿ. ಸೇರಿದಂತೆ 8 ಲಕ್ಷಕ್ಕೂ ಹೆಚ್ಚು ಪದವೀಧರರಿದ್ದು, ಅವರೆಲ್ಲರಿಗೂ ಉದ್ಯೋಗ ಕಲ್ಪಿಸುವುದು ಅಸಾಧ್ಯ. ಸರಕಾರದ ಆರ್ಥಿಕ ಮಿತಿಯಲ್ಲಿ ಇದು ಸಾಧ್ಯವಿಲ್ಲದ ಮಾತು. ಪ್ರಸ್ತುತ ೬ ಲಕ್ಷ ಸರಕಾರಿ ನೌಕರರ ಸಂಬಳ, ಸಾರಿಗೆ ಮತ್ತು ಭತ್ಯೆಗೆ ರಾಜ್ಯದ ಆದಾಯದಲ್ಲಿ ಶೇ. ೪೦ರ40ಷ್ಟು ಹೋಗುತ್ತದೆ. ರಾಜ್ಯದಲ್ಲಿ ಎಲ್ಲ ಇಲಾಖೆಗಳಲ್ಲಿ ಖಾಲಿಯಿರುವ 2.30 ಲಕ್ಷ ಹುದ್ದೆಗಳನ್ನು ತುಂಬಲು ಹೋದರೆ ಸರಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಅಂದಾಜು 1 ಲಕ್ಷ ಹುದ್ದೆ ಖಾಲಿ ಇದ್ದು, ಏಕಕಾಲಕ್ಕೆ ಎಲ್ಲ ಹುದ್ದೆಗಳಿಗೂ ನೇಮಕಾತಿ ಕಷ್ಟ ಎಂದರು. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಜವಾನರ ಹುದ್ದೆಯಲ್ಲಿರುವವರು ನಿವೃತ್ತರಾದ ಬಳಿಕ ಆ ಹುದ್ದೆಗಳು ಭರ್ತಿಯಾಗಿಲ್ಲ. ಪ್ರಸ್ತುತ 1ರಿಂದ 12ನೇ ತರಗತಿವರೆಗೆ ೩೦ ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಈಗ 12 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಸಚಿವರು, ಸಂಘದ ಪದಾಧಿಕಾರಿಗಳು ನಿಖರವಾದ ಬೇಡಿಕೆಗಳನ್ನು ಸಿದ್ಧಪಡಿಸಿ ಸಚಿವರ ಕಚೇರಿಗೆ ಬಂದರೆ ಇಲಾಖಾ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

೨೦೧೫-೧೬ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿ ಹಾಗೂ ರ‍್ಯಾಂಕ್ ಪಡೆದ ಪ್ರತಿಭಾನ್ವಿತರನ್ನು ಸಚಿವ ಕಿಮ್ಮನೆ ಅವರು ಈ ಸಂದರ್ಭದಲ್ಲಿ ಸಮ್ಮಾನಿಸಿದರು. ಸಂಘದ ಪರವಾಗಿ ಕಿಮ್ಮನೆ ಅವರನ್ನು ಈ ಸಮ್ಮಾನಿಸಿ ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ರಾಜಶೇಖರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಸಾಹಿತಿ ನಾ. ಡಿಸೋಜ, ರೈತ ಮುಖಂಡ ಕಡಿದಾಳು ಶಾಮಣ್ಣ, ಸಂಘದ ಅಧ್ಯಕ್ಷ ಯಲ್ಲಪ್ಪ ಎಂ., ಪ್ರಧಾನ ಕಾರ್ಯದರ್ಶಿ ಶ್ಯಾಮಸುಂದರ್, ಡಾ. ಕೆ. ಎಂ. ಸುರೇಶ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ, ಸಂಘದ ಪದಾಧಿಕಾರಿಗಳಾದ ನಾರಾಯಣಸ್ವಾಮಿ ಎಂ. ಎನ್., ನೀಲಕಂಠ ಸಿ. ಹಿರೇಮಠ, ಪದ್ಮಾ ಎನ್. ಸಿ., ರವಿಕುಮಾರ್ ಎಚ್. ಎಸ್., ದಾವುಲಮುನ್ನಿ ಇ. ಕಿಲ್ಲೇದಾರ್, ಹನುಮಂತಪ್ಪ, ಮಮತಾರಾಣಿ ಎಸ್., ಎಂ. ರಂಗಸ್ವಾಮಿ, ವೀರೇಶ್ ಎಸ್. ಬಣಕಾರ್, ಆರತಿ ಎ. ಘಟಕಾಂಬ್ಳೆ, ಕೆ. ಆರ್. ಸ್ನೇಹಾ, ಕೃಷ್ಣಾ ಪಿ. ಮಾಳಗಿಮನಿ, ದೇವಿ ಎ., ಮಂಜಮ್ಮ, ಸುರೇಶ್ ಎಂ. ಮಾಲೂರು ಮೊದಲಾದವರು ಉಪಸ್ಥಿತರಿದ್ದರು. ಸಂಘದ ಜಂಟಿ ಕಾರ್ಯದರ್ಶಿ ಚಂದ್ರ ಕೆ. ಹೆಮ್ಮಾಡಿ ಅವರು ಪ್ರಾರ್ಥಿಸಿದರು. ಶರಣಪ್ಪ ಕೆ. ಅವರು ಸ್ವಾಗತಿಸಿದರು. ಯಲ್ಲಪ್ಪ ಎಂ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಟ್ರೋಜಿ ರಾವ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಬಿ. ಬಸವರಾಜ್ ಅವರು ವಂದಿಸಿದರು.

ಚಿತ್ರ ವರದಿ: ಚಂದ್ರ ಕೆ. ಹೆಮ್ಮಾಡಿ

news kspeg13 news kspeg12

Leave a Reply

Your email address will not be published. Required fields are marked *

13 − 6 =