ರಾಜ್ಯ ಸರಕಾರಕ್ಕೆ ಕಿವಿ ಕೇಳಿಸೋಲ್ಲ, ಕಣ್ಣು ಕಾಣೋಲ್ಲ: ಸಂಸದೆ ಶೋಭಾ ಆರೋಪ

Call us

ಕುಂದಾಪುರ: ಕಸ್ತೂರಿ ರಂಗನ್ ವರದಿಯನ್ನು ಸುಪ್ರಿಂ ಕೋರ್ಟ್ ಸೂಚನೆಯಂತೆ ವರದಿಗೆ ಒಳಪಡುವ ವ್ಯಾಪ್ತಿಯಲ್ಲಿ ಇರುವ ಜನವಸತಿ ಪ್ರದೇಶ, ಕಾಡು, ಈ ಭಾಗದ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ಅವಲೋಕಿಸಿ ಗ್ರಾಮವಾರು ಸರ್ವೇ ಮಾಡಿ ಎಂದು ಕಳೆದ ಒಂದು ವರ್ಷದಿಂದ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಸೂಚನೆ ನೀಡುತ್ತಿದ್ದರೂ ಇದ್ಯಾವುದನ್ನೂ ಲೆಕ್ಕಿಸದೇ ಪೂರ್ಣ ಪ್ರಮಾಣದ ವರದಿ ನೀಡಿದ್ದೇವೆ ಎಂದು ಹೇಳುವ ಮೂಲಕ ರಾಜ್ಯ ಸರಕಾರ ಜನಸಾಮಾನ್ಯರಿಗೆ ಸುಳ್ಳು ಮಾಹಿತಿಯನ್ನು ರವಾನಿಸಿದೆ ಎಂದು ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಆರೋಪಿಸಿದರು.

Call us

Call us

ಅವರು ಕುಂದಾಪುರ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಳೆದ 10 ದಿನದ ಹಿಂದೆ ಕೇಂದ್ರ ಸರಕಾರ ಹೊರಡಿಸಿದ ಅಧಿಸೂಚನೆಯಲ್ಲಿ ರಾಜ್ಯದ ಈ ವರದಿ ಮಂಜೂರು ಮಾಡಲು ಯೋಗ್ಯವಿಲ್ಲ ಎಂದು ಹೇಳಿದೆ. ಆದರೆ ರಾಜ್ಯ ಸರಕಾರಕ್ಕೆ ಕಸ್ತೂರಿ ರಂಗನ್ ವರದಿಯನ್ನು ಸಲ್ಲಿಸಲು ಇನ್ನೂ ಒಂದು ಅವಕಾಶವಿದ್ದು, ಮುಂದಿನ 50 ದಿನಗಳಲ್ಲಿ ಕೇರಳ ಮಾದರಿಯ ವರದಿಯನ್ನು ಸಿದ್ಧಪಡಿಸಿ ತಕ್ಷಣ ಕೇಂದ್ರ ಸರಕಾರ ಹಾಗೂ ಸುಪ್ರಿಂ ಕೋರ್ಟ್ ವರದಿ ಸಲ್ಲಿಸುವುದರ ಜೊತೆಗೆ, ಸುಪ್ರಿಂ ಕೋರ್ಟ್‌ನಲ್ಲಿ ಕಸ್ತೂರಿ ರಂಗನ್ ವರದಿಯ ವಕಾಲತ್ತು ವಹಿಸಲು ನಮ್ಮ ರಾಜ್ಯವನ್ನು ಪ್ರತಿನಿಧಿಸುವ ವಕೀಲರೊಬ್ಬರನ್ನು ತಕ್ಷಣವೇ ನೇಮಕ ಮಾಡಬೇಕೆಂದು ಅವರು ಆಗ್ರಹಿಸಿದರು.

ಮರಳು ಅವ್ಯವಹಾರ:
ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಹತವಾಗಿ ನಡೆಯುತ್ತಿದ್ದು ಕಾಂಗ್ರೆಸ್ ಪಕ್ಷದ ಕೆಲ ಪುಡಾರಿಗಳು ಇದರಲ್ಲಿ ತೊಡಗಿಕೊಂಡು ರಾಜ್ಯದ ಮರಳನ್ನು ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ನಮ್ಮ ಭಾಗದಲ್ಲಿ ಮರಳಿನ ಅಭಾವ ತಲೆದೂರಿದೆ. ಸರಕಾರದ ಹಲವು ಅಭಿವೃದ್ಧಿ ಕಾಮಗಾರಿಗಳು ಮರಳಿನ ಅಭಾವದಿಂದಾಗಿ ಮಂದಗತಿಯಲ್ಲಿ ಸಾಗುತ್ತಿದ್ದರೇ, ಅಧಿಕ ದರದಿಂದಾಗಿ ಬಡವರು ಮನೆ ಕಟ್ಟದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಸಮರ್ಪಕವಾದ ಮರಳು ನೀತಿ ಇಲ್ಲದಿರುವುದರಿಂದ ಸರಕಾರದ ಬೊಕ್ಕಸಕ್ಕೆ 7000ಕೋಟಿ ನಷ್ಟವಾಗುತ್ತಿದೆ. ಸರಕಾರ ಇನ್ನಾದರೂ ಸ್ಪಷ್ಟವಾದ ಮರಳುನೀತಿಯನ್ನು ಜಾರಿಗೆ ತರಬೇಕೆಂದು ಅವರು ಆಗ್ರಹಿಸಿದರು.

Call us

Call us

ಕೇಂದ್ರ ಸರಕಾರ ಕೋಡಿ ಕನ್ಯಾನ ಹಾಗೂ ಮಲ್ಪೆ ಡ್ರೆಜ್ಜಿಂಗ್ ಕಾಮಗಾರಿಗೆ ಹಣ ನೀಡಿದ್ದರೂ ಈವರೆಗೆ ರಾಜ್ಯ ಟೆಂಡರ್ ಕರೆಯದೇ ನಿರ್ಲಕ್ಷ ದೋರಣೆ ತಳೆದಿದೆ ಎಂದವರು ಆರೋಪಿಸಿದರು.

ಅನ್ನಭಾಗ್ಯ ಶೂನ್ಯಭಾಗ್ಯವಾಗಿದೆ:

ರಾಜ್ಯದ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದಂತಹ ಯಾವುದೇ ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ. ಬಜೆಟ್‌ನಲ್ಲಿ ಘೋಷಿಸಿದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ತಿಳಿಯುತ್ತಿಲ್ಲ. ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಇಂದು ಶೂನ್ಯಭಾಗ್ಯವಾಗುತ್ತಿದೆ. ಆರಂಭದಲ್ಲಿ 30ಕೆ.ಜಿ. ನೀಡುತ್ತಿದ್ದ ಅಕ್ಕಿ ಇಂದು 4ಕೆ.ಜಿ. ಗೆ ಇಳಿದಿದೆ. ಕೇಂದ್ರ ಸರಕಾರ ಅಕ್ಕಿ ಹಾಗೂ ಗೋಧಿ 31ರೂ ಹಾಗೂ 21ರೂ ನಂತೆ ಬೇರೆ ರಾಜ್ಯಗಳಿಂದ ಖರೀದಿಸಿ 3ರೂ. ಹಾಗೂ 2ರೂ. ನಂತೆ ರಾಜ್ಯ ಸರಕಾರಕ್ಕೆ ನೀಡುತ್ತಿದೆ. ಆದರೆ ಇದರ ಸದ್ಬಳಕೆಯಾಗುತ್ತಿಲ್ಲ ಎಂದರು.

ರಾಜ್ಯ ಸರಕಾರಕ್ಕೆ ಕಿವಿ ಕೇಳಿಸೋಲ್ಲ ಕಣ್ಣು ಕಾಣೋಲ್ಲ

ರಾಜ್ಯ ಸರಕಾರದ್ದು ದಪ್ಪ ಚರ್ಮ. ಸರಕಾರಕ್ಕೆ ಕಿವಿಯೂ ಕೇಳಿಸೊಲ್ಲ, ಕಣ್ಣು ಕಾಣೋಲ್ಲ. ಅದಕ್ಕಾಗಿ ಯಾರು ಏನು ಹೇಳಿದರೂ ಗೊತ್ತಾಗುತ್ತಿಲ್ಲ ಎಂದ ಸಂಸದೆ ರಾಜ್ಯ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಬಿಜೆಪಿ ನಿರಂತರವಾಗಿ ಮಾಡಲಿದೆ ಎಂದರು. ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಳ್ಳಾರಿಯಿಂದ ರೈತಚೈತನ್ಯ ಯಾತ್ರೆ ಹೊರಡಲಿದೆ. ಅಕ್ಟೋಬರ್ 5ರಂದು ಬೈಂದೂರು ಹಾಗೂ ಕೋಟೇಶ್ವರದಲ್ಲಿ ರೈತಚೈತನ್ಯ ಯಾತ್ರೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ರಾಜ್ಯ ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಕಿಶೋರ್‌ಕುಮಾರ್, ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

MP Shobha Karadlaje press meet at kundapura (4)

Leave a Reply

Your email address will not be published. Required fields are marked *

3 + nine =