ರಾತ್ರಿ ನೀಲಿ, ಹಗಲು ಹಸಿರು ಬಣ್ಣ ಬದಲಾಯಿಸುವ ಸಮುದ್ರ: ಸಾರ್ವಜನಿಕರಲ್ಲಿ ಬೆರಗು, ಆತಂಕ

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕರಾವಳಿ ಕಡಲ ಬಣ್ಣ ಬದಲಾಯಿಸುತ್ತಿದೆ. ಗಂಗೊಳ್ಳಿಯಿಂದ ಶಿರೂರೂ ಗಡಿಯ ತನಕ ಸಮುದ್ರದದಲ್ಲಿ ರಾಶಿ ರಾಶಿ ಪಾಚಿಗಳ ಮೊಗೆ, ಮೊಗೆದು ತರುತ್ತಿದೆ. ರಾತ್ರಿ ಪಾಚಿ ಮಂದಬೆಳಕಿನ ಪ್ರತಿಫಲನಕ್ಕೆ ಬೆಳಕು ಚೆಲ್ಲಿದಂತೆ ಕಂಡರೆ ಸೂರ್ಯನ ರಶ್ಮಿ ಪಾಚಿ ಹೀರಿಕೊಳ್ಳುವುದರಿಂದ ಹಸಿರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದೆ.

Click Here

Call us

Call us

ಕಳೆದ ಮೂರ‍್ನಾಲ್ಕು ದಿನದಿಂದ ಗಂಗೊಳ್ಳಿ ಕಡಲ ಕಿನಾರೆ ಪಾಚಿಯಿಂದ ಬಣ್ಣ ಬದಲಾಯಿಸಿದೆ. ಈಗಾಗಲೇ ಮಂಗಳೂರು ಉಳ್ಳಾಲದಿಂದ ಕಾರವಾದ ತನಕ ಕಡಲ ತೀರದಲ್ಲಿ ನೀಲಿ ಬೆಳಕು ಅಚ್ಚರಿ ಮೂಡಿಸಿದರೆ, ಗಂಗೊಳ್ಳಿ, ಕೋಡಿ, ಪಡುವರೆ, ಶಿರೂರು ದೊಂಬೆ ಪರಿಸರದಲ್ಲಿ ರಾತ್ರಿ ನೀಲಿ ಬೆಳಕಾದರೆ, ಹಗಲು ಪಾಚಿಯದ್ದೇ ಕಾರುಬಾರು.! ಕಡಲ ವೈಪರೀತ್ಯ ಮಾನವ ನಿರ್ಮಿತವಾದರೂ ರಾತ್ರಿ, ಹಗಲು ಬದಲಾಗುವ ನೀರಿನ ಬಣ್ಣ ವೀಕ್ಷಿಸಿ ಮೂಗಿನಮೇಲೆ ಬೆರಳಿಡುತ್ತಿದ್ದಾನೆ ಮಾನವ!

Click here

Click Here

Call us

Visit Now

ಗಂಗೊಳ್ಳಿ ಲೈಟ್ ಹೌಸ್ ಮಡಿ ಸಮುದ್ರ ತೀರದಲ್ಲಿ ಸಮುದ್ರ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಇಂತಾದ್ದೊಂದು ಅಚ್ಚರಿ ಗಂಗೊಳ್ಳಿಯಲ್ಲಿ ಮೊದಲ ಬಾರಿ ಗೋಚರಿಸಿದೆ. ದಿನೇ ದಿನೇ ಸಮುದ್ರ ಮಾಲೀನ್ಯದ ಮೂಲಕ ಮೀನು ಸಂತತಿ ಕ್ಷೀಣಿಸುತ್ತಿದ್ದು, ಸಮುದ್ರದಲ್ಲಿ ಕಂಡುಬಂದ ಪಾಚಿ ಮುಂದೆ ಏನು ಅನಾಹುತಕ್ಕೆ ಕಾರಣವಾಗಲಿದೆಯೋ ಎಂಬ ಆತಂಕದಲ್ಲಿ ಮೀನುಗಾರರಿದ್ದಾರೆ.

ಸಮುದ್ರದ ನೀರು ನೀಲಿ ಬಣ್ಣಕ್ಕೆ ತಿರುಗೋದಕ್ಕೆ ನೇರ ಕಾರಣ ಪರಿಸರ ಮಾಲೀನ್ಯ ಎಂದು ಪರಿಸರ ತಜ್ಞರ ನೇರ ಆರೋಪ. ದಕ, ಉಡುಪಿ, ಕಾರವಾರ ಜಿಲ್ಲೆಯಲ್ಲಿ ಮೂರು ಲಕ್ಷ ಮೀನುಗಾರ ಕುಟುಂಬವಿದ್ದು, ಮೀನು ಕ್ಷಾಮದಿಂದ ಬದುಕು ನಾಚಾರ ಆಗತ್ತಿದೆ. ಅದರೊಟ್ಟಿಗೆ ಕರೋನಾ ಹಾವಳಿಯಿಂದ ಕಡಲ ಮಕ್ಕಳು ನೀರಿಗಿಳಿಯದೆ ಮುಂದಿನ ದಾರಿಯಂತೂ ಎನ್ನುವ ಚಿಂತೆಯಲ್ಲಿ ದಿನ ಕಳೆದಿದ್ದಾರೆ. ದಿನೇ ದಿನೇ ಸಮುದ್ರ ಮಾಲೀನ್ಯದ ಮೂಲಕ ಮುಂದೊಂದು ದಿನ ಮೀನು ಸಿಗದಿದ್ದರೂ ಅಚ್ಚರಿಯಲ್ಲ. ಆಳ ಮೀನುಗಾರಿಕೆ, ಸಣ್ಣ ಬಲೆಗಳ ಬಳಕೆ ಮೀನು ಸಂತತಿ ಸಾರಿಸಿಗುಡಿಸಿ ತೆಗೆಯಲಾಗುತ್ತದೆ. ಸಮುದ್ರವನ್ನೇ ನಂಬಿ ಸಾಹಸದ ಜೀವನ ಕಟ್ಟಿಕೊಳ್ಳುವ ಮೀನುಗಾರರ ಬದುಕು ಊಹಿಸಲೂ ಸಾಧ್ಯವಿಲ್ಲ. ಬೀಚ್ ಸೊಬಗು ನೋಡುವ ಅಮೂರ್ತ ಜೀವನೋತ್ಸವ ತುಂಬುವ ಸಮುದ್ರಕ್ಕೆ ಪ್ರವಾಸಿಗರೇ ಮುಳುವಾಗುತ್ತಿರುವುದು ಖೇದಕರ ಸಂಗತಿ. ಪ್ಲಾಸ್ಟಿಕ್, ಬಾಟಲಿ ಚೂರು, ಗಾಜಿನ ಓಡು ವಿವಿಧ ಬಗೆ ಆಹಾರ ಪಟ್ಟಣ, ನೀರಿನ ಬಾಟಲಿ, ಒಡೆದ ಬೀರ್, ಬ್ರಾಂಡಿ ಬಾಟಲಿ ಚೂರು, ಕಾರ್ಖಾನೆಗಳ ರಾಸಾಯನಿಕ ನೀರು, ಕೊಚ್ಚೆ ನೀರು ಸಮುದ್ರ ಸೇರಿ ದಿನೇ ದಿನೇ ಮೀನಿನ ಸಂತತಿ ಕ್ಷೀಣಿಸುತ್ತಿದ್ದರೂ ಎಚ್ಚರಾಗದ ಮಾನವರ ಮೂರ್ಖತನಕ್ಕೆ ಎಣೆಯಿಲ್ಲ. ನೀಲಿ ಬೆಳಕು ಪಾಚಿ ಎಲ್ಲವೂ ನಮ್ಮಿಂದಲೇ ಸೃಷ್ಟಿಯಾಗಿದ್ದು, ಸಮುದ್ರ ನೀರು ಜಲಚರಗಳ ಹಸಿರುಕಟ್ಟಿ, ಸ್ನಾನ ಮಾಡುವುದಕ್ಕೂ ಆಗದ ಪರೀಸ್ಥಿರಿಗೆ ಬರುವ ಮುನ್ನಾ ಎಚ್ಚರಾಗಬೇಕಿದೆ.

ಸಮುದ್ರದಲ್ಲಿ ನೀಲಿ ಬೆಳಕು ಪಾಚಿ ಮುಂತಾದ ಅಪಸೌವ್ಯಗಳಿಗೆ ಪರಿಸರ ಮಾಲೀನ್ಯವೇ ಮುಖ್ಯ ಕಾರಣ. ತ್ಯಾಜ್ಯ, ಕಸಕಡ್ಡಿ, ಮಾಲೀನ್ಯದಿಂದ ಆರ್ಗನಿಕ್ ಲೋಡ್ ಜಾಸ್ತಿಯಾಗಿ ಸಮುದ್ರ ನೀರು ಪಾಚಿಕೊಟ್ಟುವುದಲ್ಲದೆ ಮಂಗಳೂರು ಕಡಲ ತೀರದಲ್ಲಿ ಕಂಡುಬಂದ ನೀಲಿ ಲೈಟಿಗೂ ಪರಿಸರ ಮಾಲೀನ್ಯವೇ ಕಾರಣ.ಮಾನವ ಹಸ್ತಕ್ಷೇಪವೇ ಸಮುದ್ರದಲ್ಲಿ ಆಗುತ್ತಿರುವ ಬದಲಾವಣೆ ಅಪಸೌವ್ಯಗಳಿಗೆ ಕಾರಣವಾಗುತ್ತಿರುವುದು ಬೇಸರದ ಸಂಗತಿ. ಈಗಾಗಲೇ ಮೀನುಗಾರರ ಜೊತೆ ಸಂವಹನ ನಡೆಸಿದ್ದು, ತ್ಯಾಜ್ಯ ಕಸಕಡ್ಡಿ, ರಸಾಯನಿಕ ನೀರು ಸಮುದ್ರ ಸೇರದಂತೆ ಕಣ್ಣಿಡುವಂತೆ ಸಲಹೆ ಮಾಡಿದ್ದು, ಆದಷ್ಟು ಸಮುದ್ರ ಮಾಲೀನ್ಯ ತಡೆಯುವದೇ ಇದಕ್ಕೆ ಪರಿಹಾರ. ಮಾಲೀನ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೂಡಾ ಮಾಡಲಾಗುತ್ತಿದೆ. ನಾಗರಿಕರು ತಮ್ಮ ಜವಾಬ್ದಾರಿ ಹರಿತು ನದಿ, ಜಲ ಮಾಲೀನ್ಯ ಆಗದಂತೆ ನೋಡಿಕೊಳ್ಳುವುದೇ ಪರಿಹಾರ. – ಡಾ.ಸೆಂಥಿಲ್, ವೈಸ್ ಛಾನ್ಸಿಲರ್ ಮೂಗಿಗಾರಿಕಾ ಕಾಲೇಜ್, ಮಂಗಳೂರು.
ಸಮುದ್ರ ನೀರು ಪಾಚಿಕಟ್ಟುವುದಕ್ಕೆ ಕಾರಣವೇನು ಎನ್ನುವುದ ಅಧಿಕಾರಿಗಳು ಕಂಡುಕೊಂಡು ಪರಿಹರ ದಾರಿ ಹುಡುಕಬೇಕಿದೆ. ಸಮುದ್ರ ಪಾಚಿಕಟ್ಟುವುದರಿಂದ ಮೀನಿ ಸಂತತಿ ಮೇಲೆ ಬೀಡುವ ಪರಿಣಾಮ ಮತ್ತು ಪರಿಹಾರದ ದಾರಿ ಕಂಡುಕೊಳ್ಳದಿದ್ದರೆ ಮೀನುಗಾರರು ರಸ್ತೆ ಬರುತ್ತಾರೆ – ವಿಶ್ವನಾಥ ಗಂಗೊಳ್ಳಿ ಮೀನುಗಾರ.

Call us

Leave a Reply

Your email address will not be published. Required fields are marked *

three × five =