ರಾಷ್ಟ್ರೀಯ ಪಕ್ಷಗಳಿಂದ ಕರಾವಳಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಿಂಗಯ್ಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳುವ ಉದ್ದೇಶದಿಂದ ಕರಾವಳಿ ಜಿಲ್ಲೆಯ ಜನರ ಭಾವನೆ ಕೆರಳಿಸಿ ಜಿಲ್ಲೆಗೆ ಬೆಂಕಿಯಿಡುವ ಕೆಲಸ ಮಾಡುತ್ತಿದೆ, ಇದರಿಂದ ಈ ಭಾಗದ ಜನರು ಹೊರಬರಬೇಕಾದರೆ ಮುಂದಿನ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳದ ಕಡೆಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ. ಬಿ. ನಿಂಗಯ್ಯ ಹೇಳಿದ್ದಾರೆ.

Call us

Call us

Visit Now

ಬೈಂದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ, ಪಂಗಡದ ಜನರ ಏಳಿಗೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಬಿಜೆಪಿ ಮುಖಂಡರು ದಲಿತರ ಮನೆಗೆ ಭೇಟಿ ನೀಡಿ ಅಲ್ಲಿ ಹೋಟೇಲ್ ಊಟ ಸವಿಯುತ್ತಿದ್ದಾರೆ, ಎರಡು ಪಕ್ಷಗಳಿಗೆ ದಲಿತರ ಬಗ್ಗೆ ನೈಜ ಕಾಳಜಿಯಿಲ್ಲ. ಜೆಡಿಎಸ್ ಪಕ್ಷ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡದ ಜನರ ನಡಿಗೆ ಜೆಡಿಎಸ್ ಕಡೆಗೆ ಎಂಬ ಆಂದೋಲನ ರೂಪಿಸಲಿದೆ, ಈ ಬಗ್ಗೆ ಸೆ. ೨೯ಕ್ಕೆ ಪರಿಶಿಷ್ಠ ಜಾತಿ ಪಂಗಡದ ಬೃಹತ್ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಈ ಸಮಾವೇಶದಲ್ಲಿ ಸುಮಾರು ೫ ಲಕ್ಷ ಜನರ ಸೇರುವ ನಿರೀಕ್ಷೆಯಿದೆ ಎಂದರು.

Click here

Call us

Call us

ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಬ್ರಹ್ಮಾಂಡ ಭೃಷ್ಟಾಚಾರದಲ್ಲಿ ತೊಡಗಿ ರಾಜ್ಯದ ಸಂಪತ್ತನು ಕೊಳ್ಳೆ ಹೊಡೆದಿದ್ದಾರೆ. ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಹಗರಣದಿಂದಾಗಿ ೧೨೨ ಸ್ಥಾನದಿಂದ ೪೦ಕ್ಕೆ ಇಳಿದಿದೆ. ಬಿಜೆಪಿ ಸರ್ಕಾರದ ಹಗರಣದ ವಿರುದ್ಧ ತೊಡೆ ತಟ್ಟಿದ ಸಿದ್ದರಾಮಯ್ಯ, ತಮ್ಮ ಅಧಿಕಾರವಧಿಯಲ್ಲಿ ರಾಜ್ಯವನ್ನು ಭೃಷ್ಠಾಚಾರದಲ್ಲಿ ದೇಶದಲ್ಲಿ ಪ್ರಥಮ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ, ಜಾತ್ಯತೀತ ಜನತಾ ದಳ ಸರ್ಕಾರದವಧಿಯಲ್ಲಿ ಜಾರಿಗೆ ಬಂದ ಯೋಜನೆಗಳ ಹೆಸರು ಬದಲಾಯಿಸಿದ್ದು ಬಿಟ್ಟರೇ ಯಾವುದೇ ಹೊಸ ಯೋಜನೆ ಜಾರಿಗೆ ತಂದಿಲ್ಲ ಎಂದು ಟೀಕಿಸಿದ ಅವರು ಕೃಷಿಕರ ಸಾಲಮನ್ನಾ ಘೋಷಣೆ ಮಾಡಿದರು ಇದುವರೆಗೂ ಚಿಕ್ಕಾಸು ಹಣವನ್ನು ಸಹಕಾರಿ ಸಂಘಗಳಿಗೆ ಪಾವತಿಸಿಲ್ಲ ಎಂದು ದೂರಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ, ಮಹಾಪ್ರಧಾನ ಕಾರ್ಯದರ್ಶಿ ಕೊಲ್ಲೂರು ಶ್ರೀಕಾಂತ್ ಅಡಿಗ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ವಾಸುದೇವ ರಾವ್, ಮನ್ಸೂರ್ ಇಬ್ರಾಹಿಂ, ಶಾಲಿನಿ ಶೆಟ್ಟಿ ಕೆಂಚನೂರು, ರೋಹಿತ್ ಕರಂಬಳ್ಳಿ, ಅನಿತಾ ಶೆಟ್ಟಿ, ಸುಧಾಕರ ಶೆಟ್ಟಿ, ಯುವ ಜನತಾದಳದ ಅಧ್ಯಕ್ಷ ಅಬ್ದುಲ್ ವಾಹಾಬ್ ಮುಂತದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *

18 − four =