ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಂದಾಪುರದ ಸತೀಶ್ ಖಾರ್ವಿ 66 ಕೆಜಿ ಭಾಗದಲ್ಲಿ ಒಟ್ಟು 570 ಕೆಜಿ ಭಾರ ಎತ್ತಿ ಕಂಚಿನ ಪದಕ ಪಡೆದಿದ್ದಾರೆ.
ಅವರು ಕುಂದಾಪುರದ ನ್ಯೂ ಹಕ್ಯುಲೆಸ್ ಜಿಮ್‌ನ ವ್ಯವಸ್ಥಾಪಕರು ಹಾಗೂ ಖಾರ್ವಿ ಕೇರಿ ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿದ್ದಾರೆ. ನ.16ರಂದು ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಕರ್ನಾಟಕದ ಪ್ರತಿನಿಧಿಸಲಿದ್ದಾರೆ.
