ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಯ ಸೇವಾ ಸಂಘ ಮತ್ತು ರಾಷ್ಟ್ರೀಯ ಮತದಾರರ ಕ್ಲಬ್ನ ಜಂಟಿ ಆಶ್ರಯದಲ್ಲಿ ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಡೆಯಿತು.
ಹಿರಿಯ ಶಿಕ್ಷಕರಾದ ಯು.ಹೆಚ್ ರಾಜಾರಾಮ್ ಭಟ್ ಮತದಾನ ಜಾಗೃತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ಧಾರಿಯ ಕುರಿತು ತಿಳಿಸಿದರು. ಶಿಕ್ಷಕ ರಾಘವೇಂದ್ರ ಬಿಲ್ಲವ ಪ್ರತಿಜ್ಞಾವಿಧಿ ವಾಚಿಸಿದರು.
ಮುಖ್ಯೋಪಾಧ್ಯಾಯರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ರೋಸಮ್ಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
