ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕ್ಯಾಂಪ್‌ನ ಸಮಾರೋಪ ಸಮಾರಂಭ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಆಳ್ವಾಸ್ ಎನ್‌ಸಿಸಿ ಘಟಕ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಹಯೋಗದೊಂದಿಗೆ ನಡೆದ 3 ದಿನಗಳ ಕ್ಯಾಂಪ್‌ನ ಸಮಾರೋಪ ಸಮಾರಂಭ ಇತ್ತೀಚೆಗೆ ಮಿಜಾರ್‌ನಲ್ಲಿ ನಡೆಯಿತು.

Click Here

Call us

Call us

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಂಗಳೂರು ಗ್ರೂಪ್ ಹೆಡ್‌ಕ್ವಾರ್ಟರ‍್ಸ್‌ನ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮ, ಪ್ರತಿಯೊಬ್ಬರೂ ಇನ್ನೊಬ್ಬರ ಕುರಿತು ಕಾಳಜಿವಹಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅಲ್ಲದೆ ಸಹಾನುಭೂತಿ, ಭರವಸೆ, ಧೈರ್ಯದಿಂದ ಜೀವನ ನಡೆಸಬೇಕು ಎಂದರು. ಜೀವನದಲ್ಲಿ ಸಾವಿರ ಸಮಸ್ಯೆಗಳು ಬಂದರು ಅದನ್ನು ತಾಳ್ಮೆಯಿಂದ ಎದುರಿಸಿ, ಇತರರ ಸಮಸ್ಯೆಗೂ ಸ್ಪಂದಿಸುವ ಹೃದಯ ಶ್ರೀಮಂತಿಕೆ ಹೊಂದಿರಬೇಕು ಎಂದರು.

Click here

Click Here

Call us

Visit Now

ನಂತರ ಮಾತಾನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಎನ್‌ಸಿ.ಸಿ. ಕೆಡೆಟ್ ಆಗಿರುವಾಗ ಮಾತ್ರ ಶಿಸ್ತನ್ನು ಪಾಲಿಸದೇ ಇತರ ಸಂದರ್ಭಗಳಲ್ಲಿಯೂ ಶಿಸ್ತನ್ನು ಕಾಪಾಡಬೇಕು. ಯಾವಾಗ ನಾವು ನಮ್ಮ ಸ್ವಂತ ಬುದ್ಧಿ ಶಕ್ತಿಯನ್ನು ಉಪಯೋಗಿಸುವುದಿಲ್ಲವೋ, ಆವಾಗ ನಾವು ನಮ್ಮತನವನ್ನು ಕಳೆದುಕೊಳ್ಳುತ್ತವೆ. ಈ ಮೂರು ದಿನಗಳ ಕ್ಯಾಂಪ್‌ನಲ್ಲಿs ಸಿದ್ದಾಂತದ ಕಲಿಕೆಯ ಜತೆಗೆ ಪ್ರಾಯೋಗಿಕ ಹಂತದಲ್ಲಿ ಕಲಿತ ವಿದ್ಯೆಗಳನ್ನು ನಿಮ್ಮ ಜೀವನದಲ್ಲಿ ಆಳವಡಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಸಬ್ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್ ಉಪಾಧ್ಯ, ಹೆಡ್ ಕಾನ್ ಸ್ಟೇಬಲ್ ಬಾಳಪ್ಪ ಎಂ.ಜಿ., ಹೆಡ್ ಕಾನ್ ಸ್ಟೇಬಲ್ ಜಿ.ಎಲ್ ಆಕಾಶ್, ಕಾನ್ ಸ್ಟೇಬಲ್ ಜವೇದ್ ಖಾಸಿ, ಕಾನ್ ಸ್ಟೇಬಲ್ ಜಿ.ಡಿ. ಕಣ್ಣನ್ ಕೆ.ಎಸ್., ಕಾನ್ ಸ್ಟೇಬಲ್ ಎಸ್.ಸಿ ಹೂಗಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದರು.

ಕಾರ್ಯಗಾರದಲ್ಲಿ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡೀಸ್, ಪ್ಲೈಯಿಂಗ್ ಆಫೀಸರ್ ಪರ್ವೇಝ್ ಶರೀಫ್ ಬಿ.ಜಿ., ಸೇನಾ ವಿಭಾಗದ ಅಸೋಸಿಯೇಟ್ ಎನ್ ಸಿಸಿ ಆಫೀಸರ್ ಕ್ಯಾಪ್ಟನ್ ಡಾ. ರಾಜೇಶ್ ನೌಕಾ ವಿಭಾಗದ ಆಸೋಸಿಯೇಟ್ ಎನ್‌ಸಿಸಿ ಆಫೀಸರ್ ಸಬ್ ಲೆಫ್ಟಿನೆಂಟ್ ನಾಗರಾಜ್ ಉಪಸ್ಥಿತರಿದ್ದರು. ಕೆಡೆಟ್ ಅಕ್ಷಿತಾ ನಿರೂಪಿಸಿ, ಕುಮಾರಿ ಖ್ಯಾತಿ ವಂದಿಸಿದರು.

Call us

Leave a Reply

Your email address will not be published. Required fields are marked *

20 + twelve =