ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ: ಶರತ್, ಜಾಗೃತ್, ಮೇಘಾ ಸನಾ ಚಾಂಪಿಯನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಕಿರಣ್ಸ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಸಹನಾ ಕನ್‌ವೆನ್‌ಶನ್ ಸೆಂಟರ್ ಕೋಟೇಶ್ವರದಲ್ಲಿ ನಡೆಯಿತು. ಮೂರು ದಿನ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಜನರಲ್ ಸೆಕ್ರೆಟರಿ ಶಿಹಾನ್ ಭರತ್ ಶರ್ಮಾ ಡೆಲ್ಲಿ ಉದ್ಘಾಟಿಸಿದರು.

ಸಹನಾ ಗ್ರೂಪ್ ಮಾಲೀಕ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗಣೇಶ್ ಶೆಟ್ಟಿ ಮೊಳಹಳ್ಳಿ, ಯಕ್ಷಗಾನ ಕಲಾರಂಗ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಯೋಗಿಂದರ್ ಚಾಹಾಣ್ ಡೆಲ್ಲಿ, ಲಕ್ಷ್ಮೀಕಾಂತ ಪಿ. ಸಾರಂಗ್ ಮುಂಬಯಿ, ತಾಲೂಕ್ ಬಿಲ್ಲವ ಸಂಘ ಪ್ರಧಾನ ಕಾರ‍್ಯದರ್ಶಿ ರಾಜೀವ ಕೋಟಿಯಾನ್, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ ಉಪಸ್ಥಿತರಿದ್ದರು.

ಗ್ರ್ಯಾಂಡ್ ಚಾಂಪಿಯನ್ ಫೈಟಿಂಗ್‌ನಲ್ಲಿ ಬೆಂಗಳೂರು ಶರತ್ ಕಟಾದಲ್ಲಿ ಎಂ.ಪಿ. ಜಾಗ್ರತ್ ಬೆಂಗಳೂರು ಚಾಂಪಿಯನ್ ಆದರೆ ಹುಡುಗಿಯರ ವಿಭಾಗದಲ್ಲಿ ಕಟಾದಲ್ಲಿ ಮೇಘಾ ಉಡುಪಿ, ಫೈಟಿಂಗ್‌ನಲ್ಲಿ ಸನ ಉಡುಪಿ ಗ್ರ್ಯಾಂಡ್ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ.

ಇದೇ ಸಂದರ್ಭದಲ್ಲಿ ಸಮಾಜಸೇವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಲ್ಲೂರು ಶಿವರಾಮ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸರ್ಟಿಫೀಕೇಟ್ ನೀಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿತ್ಯಾನಂದ ಕೆಮ್ಮಣ್ಣು ಅವರನ್ನು ಸಮಾರೋಪದಲ್ಲಿ ಸನ್ಮಾನಿಸಲಾಯಿತು. ಈ ಸ್ಪರ್ಧೆಯ ಯಶಸ್ಸಿಗೆ ಕಾರಣರಾದ ಕೀರ್ತಿ ಜಿ.ಕೆ. ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.ಸುರೇಂದ್ರ ಶೆಟ್ಟಿ, ರಾಜೀವ ಕೋಟಿಯಾನ್, ರವಿಕಿರಣ್ ಮುರ್ಡೇಶ್ವರ ಉಪಸ್ಥಿತರಿದ್ದರು. ಪುಟಾಣಿ ಚಿರತನ್ಮಯಿ ಪ್ರಾರ್ಥನೆಯೊಂದಿಗೆ ಚಾಲನೆಗೊಂಡಿತು. ಶಿಹಾನ್ ಕಿರಣ್ ಕುಂದಾಪುರ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ನಿರೂಪಿಸಿದರು. ಮಂಜುನಾಥ ಜಿ. ವಂದಿಸಿದರು.

Leave a Reply

Your email address will not be published. Required fields are marked *

fifteen − 10 =