ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಉಡುಪಿ ಜಿಲ್ಲೆಯ ರಾಷ್ಟ್ರಿಯ ಹೆದ್ದಾರಿ-೬೬ರಲ್ಲಿ ಅಳವಡಿಸಿರುವ ಕನ್ನಡ ಫಲಕಗಳಲ್ಲಿರುವ ಪದಗಳ ತಪ್ಪು ಬಳಕೆ ಸರಿಪಡಿಸುವಂತೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಸ್ತಾನ ಸುಂಕ ಸಂಗ್ರಹಣಾ ಕೇಂದ್ರದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರಕುಮಾರ್ ಕೋಟ ಸೇರಿದಂತೆ ಪರಿಷತ್ತಿನ ತಾಲೂಕು, ಹೋಬಳಿ ಪದಾಧಿಕಾರಿಗಳು, ಸಂಘಸಂಸ್ಥೆಗಳ ಪ್ರಮುಖರು ಪ್ರತಿಭಟನೆಗೆ ಸಾಥ್ ನೀಡಿದರು.
ರಾ.ಹೆ-೬೬ರ ಫಲಕಗಳಲ್ಲಿ ಕನ್ನಡ ಪದಗಳ ತಪ್ಪು ಬಳಕೆ ಸರಿಪಡಿಸುವಂತೆ ಆಗ್ರಹಿಸಿ ಕಸಾಪ ಪ್ರತಿಭಟನೆ
