ರೈತರ ಹೆಸರಿನಲ್ಲಿ ವ್ಯಾಪಾರೀಕರಣ ಸಲ್ಲದು: ಎಸ್. ಪ್ರಕಾಶ್ಚಂದ್ರ ಶೆಟ್ಟಿ

Call us

Call us

Click here

Click Here

Call us

Call us

Visit Now

ಬೈಂದೂರು: ರೈತರ ಬದುಕು ಸ್ವಾಭಿಮಾನದ ಬದುಕಾಗಿದ್ದು, ಸಮಸ್ಯೆಗಳಿಗೆ ಧೃತಿಗೆಡದೆ ಜೀವನ ಸಾಗಿಸುವ ರೈತರ ಜೀವನ ಇತರರಿಗೆ ಮಾದರಿಯಾಗಿದೆ. ಇಂದು ರೈತರ ಹೆಸರು ಬಳಸಿಕೊಂಡು ವೈಭವಿಕರಣದ ವ್ಯಾಪಾರೀಕರಣ ನಡೆಯುತ್ತಿದೆ ಆದರೆ ನಿಜವಾದ ರೈತರ ಸ್ಥಿತಿ ಚಿಂತಜನಕವಾಗಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

Call us

Call us

ಉಪ್ಪುಂದ ಶಂಕರ ಕಾಲಾ ಮಂದಿರ ಸಮೃದ್ಧ್ ಸಭಾಭವನದಲ್ಲಿ ಖಂಬದಕೋಣೆ ರೈತರ ಸೇವಾ ಸಂಘ, ಸಂಘವು ಪ್ರಾಯೋಜಿಸಿರುವ ರೈತ ಶಕ್ತಿ ಹಾಗೂ ರೈತ ಸೇವಾ ಕೂಟ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ದಿನಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪ್ಪುಂದ ತುಂಡಿಹಿತ್ಲು ಹಿರಿಯ ರೈತ ವಿಠಲ್ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು

ಕುಂದಾಪುರ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್, ಕುಂದಾಪುರ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಚಿದಂಬರ್ ರಾವ್, ಜಿಪಂ ಮಾಜಿ ಸದಸ್ಯ ಮದನ್ ಕುಮಾರ್, ಸಂಘದ ನಿರ್ದೇಶಕರಾದ ಮೊಹನ್ ಪೂಜಾರಿ, ಬಿ.ಎಸ್.ಸುರೇಶ್ ಶೆಟ್ಟಿ, ದಿನಿತಾ ಶೆಟ್ಟಿ, ಕೆ. ಅಣ್ಣಪ್ಪ ಖಾರ್ವಿ, ಈಶ್ವರ ಹಕ್ಲತೋಡು, ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೈ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

seventeen + 17 =