ರೈಲು ಪ್ರಯಾಣಿಕರಿಗೆ ತ್ವರಿತ ಸೇವಾ ಸಹಾಯವಾಣಿ

Call us

ರೈಲು ಪ್ರಯಾಣಿಕರಿಗೆ ವಿವಿಧ ರೀತಿಯಲ್ಲಿ ತ್ವರಿತ ಸೇವೆ ಒದಗಿಸಲು ಕೊಂಕಣ ರೈಲ್ವೇ ಹಲವು ಸಹಾಯವಾಣಿ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇದರ ಸದುಪಯೋಗವನ್ನು ರೈಲ್ವೇ ಪ್ರಯಾಣಿಕರು ಪಡೆದುಕೊಳ್ಳಬಹುದು.

Call us

139 ಟೋಲ್‌ಫ್ರೀ ಸಂಖ್ಯೆಗೆ ಕರೆ/ಎಸ್‌ಎಂಎಸ್‌ ಮಾಡುವ ಮೂಲಕ ಪಿಎನ್‌ಆರ್‌(ಟಿಕೆಟ್‌ ಸ್ಥಿತಿಗತಿ) ಮತ್ತು ದೇಶದ ವಿವಿಧೆಡೆಗಳಲ್ಲಿ ರೈಲಿನ ಓಡಾಟ, ನಿಲುಗಡೆ ಮತ್ತಿತರ ಎಲ್ಲ ಮಾಹಿತಿ ಪಡೆದುಕೊಳ್ಳಬಹುದು. 18002331332ಗೆ ಕರೆ ಮಾಡಿ ಕೊಂಕಣ ರೈಲು ಮಾರ್ಗದಲ್ಲಿ ಎಲ್ಲ ರೈಲುಗಳ ಓಡಾಟದ ಸಂಪೂರ್ಣ ವಿವರವನ್ನು ಕ್ಷಿಪ್ರವಾಗಿ ಪಡೆದುಕೊಳ್ಳಬಹುದು. ರೈಲು ಪ್ರಯಾಣದ ಸಂದರ್ಭ ಯಾವುದೇ ರೀತಿಯ ತೊಂದರೆಗಳು ಉಂಟಾದಲ್ಲಿ 9004470700ಗೆ ಎಸ್‌ಎಂಎಸ್‌ ಮಾಡಿ ದೂರು ಸಲ್ಲಿಸಬಹುದು.

ಮಾತ್ರವಲ್ಲದೆ ಭಾರತೀಯ ರೈಲ್ವೇಯ ಸಹಾಯವಾಣಿ 138ನ್ನು ಇತರ ಮಾಹಿತಿಗೆ ಹಾಗೂ 182 ಸಹಾಯವಾಣಿಯನ್ನು ಭದ್ರತೆ ಸಂಬಂಧಿ ಕರೆಗೆ ಬಳಸಿಕೊಳ್ಳಬಹುದು. ಪ್ರಯಾಣಿಕ ಸ್ನೇಹಿ ಕ್ರಮವಾಗಿ ರೈಲ್ವೇ ಆರಂಭಿಸಿರುವ ಈ ಸೌಲಭ್ಯಗಳ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳುವಂತೆ ಕೊಂಕಣ ರೈಲ್ವೇ ಇಲಾಖೆ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

3 × 2 =