ರೋಟರಿಯ ಸ್ನೇಹ ಒಡನಾಟ ಅನನ್ಯ : ಎ.ಎಸ್.ಎನ್. ಹೆಬ್ಬಾರ್

Call us

ಕುಂದಾಪುರ: ಸ್ನೇಹ, ಒಡನಾಟ, ಶಾಂತಿಗಾಗಿ ಹುಟ್ಟಿಕೊಂಡ ರೋಟರಿಗೆ 111 ವರ್ಷ ಕಳೆದರೂ 16ರ ತರುಣಿಯಂತೆ ನವ ಉತ್ಸಾಹದಿಂದ ಮುನ್ನಡೆಯುತ್ತಿದ್ದು ದಿನದಿಂದ ದಿನಕ್ಕೆ ರೋಟರಿ ಹೊಸ ಯುವಕರನ್ನು ತನ್ನೊಳಗೆ ಬರಮಾಡಿ ಕೊಳ್ಳುತ್ತಾ ಬೆಳೆಯುತ್ತಿದೆ. ನಾವೆಲ್ಲರೂ ಒಂದಡೆ ಸೇರಿ ಸಂತೋಷವನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯನ್ನು ನಿರ್ಮಿಸಿ ಕೊಟ್ಟಿದ್ದು ರೋಟರಿ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಎ.ಎಸ್.ಎನ್. ಹೆಬ್ಬಾರ್ ಹೇಳಿದರು.

Call us

ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ಕುಂದಾಪುರದ ಅಕ್ಷತಾ ಸಭಾಂಗಣದಲ್ಲಿ ನಡೆದ ರೋಟರಿ ದಿನವನ್ನು ಉದ್ಘಟಿಸಿ ಮಾತನಾಡಿದರು. ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ರೋಟರಿ ಜಿಲ್ಲೆ ೩೧೮೦ ಇದರ ವಲಯಗಳಲ್ಲಿ ವಲಯ೧ ಕಾರ್ಯಕ್ರಮ ಸಂಘಟನೆ, ಭಾಗವಹಿಸುವಿಕೆ, ಸಾಮಾಜಿಕ ಸೇವೆಗಳು ಮತ್ತು ರೋಟರಿ ಫೌಂಡೇಶನ್‌ಗೆ ನೀಡಿದ ಕೊಡುಗೆಗಳ ಮೂಲಕ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದ್ದು ರೋಟರಿ ಅಧ್ಯಕ್ಷರ, ಸದಸ್ಯರ ಸಹಕಾರ ಅನನ್ಯವಾದುದು ಎಂದರು.

ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ದಿನಕರ ಪಟೇಲ್ ಅಧ್ಯಕ್ಷತೆವಹಿಸಿದ್ದರು. ಮಾಜಿ ಅಸಿಸ್ಟೆಂಟ್ ಗವರ್ನರ್ ಮೊಳಹಳ್ಳಿ ಗಣೇಶ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಸ್ಥಾಪಕಾಧ್ಯಕ್ಷ ದಿನಕರ ಆರ್. ಶೆಟ್ಟಿ, ಜೋನಲ್ ಲೆಫ್ಟಿನೆಂಟ್‌ರಾದ ಗಜೇಂದ್ರ ಶೆಟ್ಟಿ, ಶ್ಯಾಮರಾಜ್ ಭಟ್, ಮಂಜುನಾಥ ಮಹಾಲೆ, ರೋಟರಿ ವಲಯ ೧ರ ಕ್ಲಬ್‌ಗಳ ಅಧ್ಯಕ್ಷರುಗಳಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಮಹೇಶ್ ಬೆಟ್ಟಿನ್, ವಾಸುದೇವ ಕಾರಂತ್, ಚಂದ್ರಶೇಖರ ಶೆಟ್ಟಿ, ಡಾ. ಗಣೇಶ್, ಸಂತೋಷ್ ಪ್ರಭು, ವಿಜಯ ಕುಮಾರ್, ಕೃಷ್ಣ ಚಾತ್ರ, ಸಂತೋಷ್‌ಕುಮಾರ್ ಶೆಟ್ಟಿ, ಕೆ. ವಿಶ್ವನಾಥ ಮಧ್ಯಸ್ಥ, ಪ್ರದೀಪ ಡಿ. ಕೆ, ರಘುರಾಮ ಶೆಟ್ಟಿ ಉಪಸ್ಥಿತರಿದ್ದರು. ನರಸಿಂಹ ಹೊಳ್ಳ ಮತ್ತು ಕಲ್ಪನಾ ಭಾಸ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

20 + sixteen =