ರೋಟರಿ ಆದರ್ಶದಲ್ಲಿ ರೋಟೆರಿಯನ್‌ರ ಪಾತ್ರ ಅನನ್ಯ : ಟಿ. ಬಿ. ಶೆಟ್ಟಿ

Call us

Call us

ಕುಂದಾಪುರ: ಪರಸ್ಪರ ಸ್ನೇಹ ಸೌಹಾರ್ದತೆಯನ್ನು ವೃದ್ಧಿಸಿಕೊಳ್ಳುವ ಜೊತೆಗೆ ಸ್ವಯಂ ಶಿಸ್ತು, ಸಮಯಪಾಲನೆಗೆ ಆದ್ಯತೆಯನ್ನು ನೀಡಬೇಕಿದೆ. ರೋಟರಿ ತತ್ವ ಆದರ್ಶಗಳನ್ನು ರೂಢಿಸಿಕೊಂಡು ಸಾಮಾಜಿಕ ಜೀವನದಲ್ಲಿ ರೋಟರಿ ಸದಸ್ಯರು ಇತರರಿಗೆ ಆದರ್ಶ ಪ್ರಾಯರಾಗ ಬೇಕು. ರೋಟರಿ ಸೇವೆಗಳಲ್ಲಿ ಒಂದಾದ ಕ್ಲಬ್ ಸೇವೆಗೆ ಹೆಚ್ಚಿನ ಮಹತ್ವ ನೀಡುವ ಕ್ಲಬ್‌ನ ಬೆಳವಣಿಗೆಯ ದೃಷ್ಠಿಯಿಂದ ಅವಶ್ಯಕ ಎಂದು ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಟಿ. ಬಿ. ಶೆಟ್ಟಿ ಹೇಳಿದರು.

Call us

Call us

Call us

ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ನೂತನ ರೋಟರಿ ಸದಸ್ಯರಿಗೆ ಆಯೋಜಿಸಿದ ಮಾಹಿತಿ ಕಾರ್ಯಾಗಾರದಲ್ಲಿ ರೋಟರಿ ಆದರ್ಶದಲ್ಲಿ ರೋಟೆರಿಯನ್‌ರ ಪಾತ್ರ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.

Call us

Call us

ಖ್ಯಾತ ಕೈಗಾರಿಕೋದ್ಯಮಿ ಪ್ರಶಾಂತ್ ತೋಳಾರ್ ವೃತ್ತಿಪರ ಮಾಹಿತಿ ನೀಡಿ ಹಂಚಿನ ಕಾರ್ಖಾನೆಯ ಉದ್ಯಮದ ಹಾದಿಯ ಏಳು ಬೀಳುಗಳನ್ನು ಸ್ಮರಿಸಿಕೊಂಡು ತಮ್ಮ ವ್ಯವಹಾರ ಪ್ರಗತಿಯ ಮೈಲುಗಲ್ಲುಗಳನ್ನು ಹಂಚಿಕೊಂಡರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಸಂತೋಷ ಕೋಣಿ ವಂದಿಸಿದರು.

Leave a Reply

Your email address will not be published. Required fields are marked *

nineteen + 7 =