ರೋಟರಿ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾಗಿ ಅಜಿತ್ ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ೨೦೧೭-೧೮ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಅಜಿತ್ ಕೆ. ಆಯ್ಕೆಯಾಗಿದ್ದಾರೆ.

Call us

Call us

Call us

ಕುಂದಾಪುರ ರಾಮಕ್ಷತ್ರೀಯ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ, ರಾಣುಮಕ್ಕಿ ನಾಗಬನ ಸಮಿತಿಯ ಅಧ್ಯಕ್ಷರಾಗಿ, ರಕ್ಷಾ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರಾಗಿ, ರೋಯಲ್ ಕ್ಲಬ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿ ಸನ್‌ರೈಸ್‌ನ ಕಾರ್ಯದರ್ಶಿಯಾಗಿ ಗಣೇಶ್ ಸಿ.ಎಚ್. ಆಯ್ಕೆಯಾದರು.

ಜು.02 ಪದಪ್ರದಾನ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪದಪ್ರದಾನ ಸಮಾರಂಭ ಜುಲೈ 02ರಂದು ಸಂಜೆ 7 ಗಂಟೆಗೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಲಿದೆ. ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಮದ್ದೋಡಿ ಪದಪ್ರದಾನ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ. ಕಾಂಚನ್, ಜೋನಲ್ ಲೆಫ್ಟಿನೆಂಟ್ ಜಯಪ್ರಕಾಶ್ ಶೆಟ್ಟಿ ವೈ. ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

three × 4 =