ರೋಟರಿ ಕ್ಲಬ್ ಕುಂದಾಪುರದಿಂದ ವಿಶ್ವ ಶಾಂತಿಗಾಗಿ ಪ್ರಾರ್ಥನೆ

Call us

Call us

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಸೆ. 21ರಂದು ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ವಿಶ್ವ ಶಾಂತಿ ದಿನಾಚರಣೆಯ ಅಂಗವಾಗಿ ಕ್ಯಾಂಡಲ್ ಲೈಟ್ ಬೆಳಗಿಸಿ ವಿಶ್ವ ಶಾಂತಿಗಾಗಿ ಪ್ರಾರ್ಥನೆ ನಡೆಸಲಾಯಿತು.

Call us

Call us

Call us

ವಿಶ್ವದ ನಾನಾ ಭಾಗಗಳಲ್ಲಿ ಅಶಾಂತಿ ಹೆಚ್ಚುತ್ತಿದೆ. ಶಾಂತಿ, ನೆಮ್ಮದಿಯನ್ನು ಅರಸಿ ಸಿರಿಯಾ ಮೊದಲಾದ ದೇಶಗಳ ಜನರು ಪ್ರಾಣದ ಹಂಗು ತೊರೆದು ವಲಸೆ ಹೋಗುವ ಪ್ರಯತ್ನ ನಡೆಸುತ್ತಿದ್ದಾರೆ. ಭಯೋತ್ಪಾದನೆಯ ಕರಾಳ ಸ್ವರೂಪವನ್ನು ಉಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇಂತಹ ಕಾಲಘಟ್ಟದಲ್ಲಿ ವಿಶ್ವ ಶಾಂತಿಗಾಗಿ ನಡೆಸುವ ಪ್ರಾರ್ಥನೆ ಅರ್ಥಪೂರ್ಣ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ಪೂರ್ವಾಧ್ಯಕ್ಷ ಬಶೀರ್ ಸಾಹೇಬ್ ಕೋಟ, ರೋಟರಿ ಕ್ಲಬ್ ಕುಂದಾಪುರದ ಪೂರ್ವಾಧ್ಯಕ್ಷರಾದ ಡಾ. ಎನ್. ಪಿ. ಕಮಾಲ್, ರವಿರಾಜ್ ಶೆಟ್ಟಿ, ವಿ. ಆರ್. ಕೆ. ಹೊಳ್ಳ, ಶಶಿಧರ ಹೆಗ್ಡೆ ಸಾಲಗದ್ದೆ, ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಕೆ.ಸಿ, ಕಾರ್ಯದರ್ಶಿ ಹರ್ಷ ಶೇಟ್, ಉದ್ಯಮಿಗಳಾದ ಸತೀಶ್ ಕೋಟ್ಯಾನ್, ರಘುರಾಮ ರಾವ್, ರೋಟರ‍್ಯಾಕ್ಟ್ ಚೇರ್‌ಮೆನ್ ಎಚ್. ಎಸ್. ಹತ್ವಾರ್, ಯುವಜನ ಸೇವಾ ನಿರ್ದೇಶಕ ಪ್ರವೀಣಕುಮಾರ್ ಟಿ, ಇಂಟರ‍್ಯಾಕ್ಟ್ ಚೇರ್‌ಮೆನ್ ವೆಂಕಟೇಶ ಪ್ರಭು, ಶಿವಾನಂದ, ದಿನೇಶ್ ಮದ್ದುಗುಡ್ಡೆ, ಕಿಶೋರ್ ಕೋಟ್ಯಾನ್, ಪ್ರಶಾಂತ್ ರಾವ್, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

sixteen + three =