ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅ. ೦೨ರಂದು ಶಾಸ್ತ್ರಿ ಸರ್ಕಲ್‌ನಲ್ಲಿರುವ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಸದಸ್ಯರಾದ ಟಿ. ಬಿ. ಶೆಟ್ಟಿ, ವಿ. ಶ್ರೀಧರ ಆಚಾರ್ಯ, ಉದಯಕುಮಾರ್ ಶೆಟ್ಟಿ, ಮನೋಜ್ ನಾಯರ್, ಮುತ್ತಯ್ಯ ಶೆಟ್ಟಿ, ಡಾ| ಬಿ. ಆರ್. ಶೆಟ್ಟಿ, ನೂಜಾಡಿ ಸಂತೋಷ ಕುಮಾರ್ ಶೆಟ್ಟಿ, ಪ್ರದೀಪ ವಾಜ್, ಎಚ್. ಎಸ್. ಹತ್ವಾರ್, ವೆಂಕಟಾಚಲ ಕನ್ನಂತ, ರಂಜಿತ್ ಶೆಟ್ಟಿ, ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ಗೀತಾ ಟಿ. ಬಿ. ಶೆಟ್ಟಿ, ಸಾವಿತ್ರಿ ಕನ್ನಂತ, ವಿದ್ಯಾ ಬಿ. ಆರ್. ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.