ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ಗೆ ಜಿಲ್ಲಾ ಗವರ್ನರ್ ಆಧಿಕೃತ ಭೇಟಿ

Call us

Call us

Call us

Call us

ಕುಂದಾಪುರ: ಸಾಮಾಜಿಕ ಸೇವೆಯಲ್ಲಿ ಅರ್ಪಣಾಭಾವದೊಂದಿಗೆ ತೊಡಗಿಕೊಂಡು ವಿಶ್ವಕ್ಕೆ ವರವಾಗುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಪಾಲಿಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಆಧಿರಾಜ್ ಹೇಳಿದರು.

Call us

Click Here

Click here

Click Here

Call us

Visit Now

Click here

ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ಗೆ ಆಧಿಕೃತ ಭೇಟಿ ನೀಡಿದ ಸಂದರ್ಭ ಹಂಗಳೂರಿನ ಸಹನಾ ಕನ್ವೆನಶನ್ ಸೆಂಟರ್‌ನಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ದಿನಕರ ಪಟೇಲ್ ಅಧ್ಯಕ್ಷತೆವಹಿಸಿದ್ದರು. 2018-19 ನೇ ಸಾಲಿನ ರೋಟರಿ ಜಿಲ್ಲೆ 3180ಇದರ ಗವರ್ನರ್ ಆಗಿ ಆಯ್ಕೆಯಾದ ಅಭಿನಂದನ ಶೆಟ್ಟಿ, ಕನ್ನಡ ಮಾಧ್ಯಮ ಪ್ರಶಸ್ತಿ ಪುರಸ್ಕೃತ ರೋಷನ್ ಭಾಸ್ಕರ್ ಪೂಜಾರಿ, ಕುಂದಾಪುರ ತಾಲೂಕು ಮುಖ್ಯೋಪಧ್ಯಾಯರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ದಿನಕರ ಆರ್. ಶೆಟ್ಟಿಯವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ಮುಖವಾಣಿ ಸುರ್ಯೋದಯವನ್ನು ರೋಟರಿ ವಲಯ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಬಿಡುಗಡೆಗೊಳಿಸಿದರು. ಕ್ಲಬ್‌ಗೆ ನೂತನ ಸದಸ್ಯರನ್ನಾಗಿ ಮಹೇಶ್ ಪೂಜಾರಿ ಮತ್ತು ರವಿ. ಕೆ. ಅವರನ್ನು ಸೇರ್ಪಡೆಗೊಳಿಸಲಾಯಿತು.

ಜೋನಲ್ ಲೆಫ್ಟಿನೆಂಟ್ ಗಜೇಂದ್ರ ಶೆಟ್ಟಿ, ರೋಟರಿ ಜಿಲ್ಲಾ ಪ್ರಥಮ ಮಹಿಳೆ ಶ್ರೀಮತಿ ಜಯಶ್ರೀ ಭರತೇಶ್, ಉಪಸ್ಥಿತರಿದ್ದರು. ಬುಲೆಟಿನ್ ಎಡಿಟರ್ ಉಲ್ಲಾಸ್ ಕ್ರಾಸ್ತಾ ಸಹಕರಿಸಿದರು. ದಿನಕರ ಆರ್. ಶೆಟ್ಟಿ, ಎಲ್. ಜೆ. ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಜತೆ ಕಾರ್ಯದರ್ಶಿ ಗಣೇಶ್ ಸಿ. ಎಚ್. ವರದಿ ವಾಚಿಸಿ, ವಂದಿಸಿದರು.

Leave a Reply

Your email address will not be published. Required fields are marked *

seventeen − 9 =