ರೋಟರಿ ಜಿಲ್ಲಾ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆಗೈದ ರೋಟರಿ ಕುಂದಾಪುರ

Call us

Call us

ಕುಂದಾಪುರ: ಪುತ್ತೂರಿನಲ್ಲಿ ನಡೆದ ರೋಟರಿ 3180 ಇದರ ಜಿಲ್ಲಾ ಕ್ರೀಡಾಕೂಟ ರೋಟಾ ಸ್ಫೋರ್ಟ್ಸ್‌ನಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಕುಂದಾಪುರ ೩೦ಕ್ಕೂ ಅಧಿಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ರೋಟೇರಿಯನ್ ವಿಭಾಗದಲ್ಲಿ ಕ್ರಿಕೆಟ್‌ನಲ್ಲಿ ಪ್ರಥಮ, ಹಗ್ಗ ಜಗ್ಗಾಟದಲ್ಲಿ ದ್ವಿತೀಯ, 100 ಮೀ ಓಟದಲ್ಲಿ ಮನೋಜ್ ನಾಯರ್ ದ್ವಿತೀಯ, ಡಿಸ್ಕಸ್ ತ್ರೋನಲ್ಲಿ ಕಿಶೋರ್ ಕೋಟ್ಯಾನ್ ತೃತೀಯ, ಸ್ಲೋ ಸೈಕಲ್ ರೇಸ್‌ನಲ್ಲಿ ಬಿ.ಕಿಶೋರ್‌ಕುಮಾರ್ ಕುಂದಾಪುರ ತೃತೀಯ ಸ್ಥಾನ ಪಡೆದರು.

Call us

Call us

Call us

ಆನ್ಸ್ ವಿಭಾಗದಲ್ಲಿ ತ್ರೋಬಾಲ್ ದ್ವಿತೀಯ, ರೀಲೆಯಲ್ಲಿ ಪ್ರಥಮ, ಟೆನಿಕ್ವಾಟ್‌ನಲ್ಲಿ ಪ್ರಥಮ, 50 ಮೀ., 100 ಮೀ, 200 ಮೀ ಓಟದಲ್ಲಿ ನಯನ ಕಿಶೋರ್ ಕೋಟ್ಯಾನ್ ಪ್ರಥಮ, ಸ್ಟ್ಯಾಂಡಿಂಗ್ ಜಂಪ್, ಶಾಟ್‌ಪುಟ್‌ನಲ್ಲಿ ಗೀತಾಂಜಲಿ ಆರ್. ನಾಯ್ಕ್ ಪ್ರಥಮ, ೨೦೦ಮೀ ಓಟದಲ್ಲಿ ಸುರೇಖಾ ತೃತೀಯ, ಶಾಟ್ ಫುಟ್‌ನಲ್ಲಿ ಶಶಿರೇಖಾ ದ್ವಿತೀಯ,400 ಮೀ ವಾಕಿಂಗ್‌ನಲ್ಲಿ ಭಾರತಿ ಪ್ರಕಾಶ್ ಶೆಟ್ಟಿ ಪ್ರಥಮ, 50 ಮೀ ಓಟದಲ್ಲಿ ದ್ವಿತೀಯ, 100 ಮೀ.ನಲ್ಲಿ ತೃತೀಯ ಸ್ಥಾನ ಪಡೆದರು.

Call us

Call us

ಅನೆಟ್ಸ್ ವಿಭಾಗದಲ್ಲಿ ರೀಲೆಯಲ್ಲಿ ತೃತೀಯ, ಬಾಲಕಿಯರ ಶಾಟ್‌ಪುಟ್‌ನಲ್ಲಿ ಪ್ರಥಮ, ಡಿಸ್ಕ್ ತ್ರೋನಲ್ಲಿ ಪ್ರಥಮ ಸ್ಥಾನವನ್ನು ರೋಶನಿ ಪಡೆದರೇ, ಶಾಟ್‌ಪುಟ್‌ನಲ್ಲಿ ದ್ವಿತೀಯ, ಡಿಸ್ಕ್ ತ್ರೋನಲ್ಲಿ ದ್ವಿತೀಯ ಸ್ಥಾನವನ್ನು ಸೆನರಾ ಡಿಸೋಜಾ ಪಡೆದರು. ಬಾಲಕರ ವಿಭಾಗದಲ್ಲಿ ಶಾಟ್‌ಪುಟ್‌ನಲ್ಲಿ ಪ್ರಥಮ, 100 ಮೀ ಓಟದಲ್ಲಿ ಮತ್ತು ಲಾಂಗ್ ಜಂಪ್‌ನಲ್ಲಿ ದ್ವಿತೀಯ ಸ್ಥಾನವನ್ನು ಗಣೇಶ್ ಕೊತ್ವಾಲ್ ಪಡೆದುಕೊಂಡರು.
100 ಮೀ ಓಟದಲ್ಲಿ ಸುಹಾಸ್ ತೃತೀಯ, ಸ್ಟ್ಯಾಂಡ್ ಜಂಪ್‌ನಲ್ಲಿ ಸುಜಲ್ ತೃತೀಯ ಚೆಸ್ ಪಂದ್ಯಾಟದಲ್ಲಿ ಪ್ರಭಾವ್ ದ್ವಿತೀಯ ಸ್ಥಾನ ಪಡೆದರು. ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಬಹುಮಾನ ವಿತರಿಸಿದರು.

Leave a Reply

Your email address will not be published. Required fields are marked *

14 + 5 =