ರೋಟರಿ ಜಿಲ್ಲಾ ಕ್ರೀಡಾಕೂಟ ; ರೋಟರಿ ಕುಂದಾಪುರ ಚಾಂಪಿಯನ್ ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ನಿಟ್ಟೆ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ ೩೧೮೨ ಇದರ ಜಿಲ್ಲಾ ಮಟ್ಟದ ಕ್ರೀಡಾಕೂಟ ಸ್ಪೂರ್ತಿ ೨೦೧೬ರಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಕುಂದಾಪುರ ವಿವಿಧ ಸ್ಪರ್ಧೆಗಳಲ್ಲಿ ೨೩ ಪ್ರಥಮ, ೧೯ ದ್ವಿತೀಯ, ೧೧ ತೃತೀಯ ಸ್ಥಾನದೊಂದಿಗೆ ಅತೀ ಹೆಚ್ಚು ಪ್ರಶಸ್ತಿಯನ್ನು ಗಳಿಸಿ ಚಾಂಪಿಯನ್‌ಶಿಪ್ ಪಡೆದು ರೋಟರಿ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಿದೆ.

Call us

Call us

ಹುಡುಗರ ವಿಭಾಗದಲ್ಲಿ ಪ್ರಭಾವ್, ಹುಡುಗಿಯರ ವಿಭಾಗದಲ್ಲಿ ರೋಶನಿ, ಆನ್ಸ್ ಕಿರಿಯರ ವಿಭಾಗದಲ್ಲಿ ನಯನ ಕಿಶೋರ್, ಆನ್ಸ್ ಹಿರಿಯರ ವಿಭಾಗದಲ್ಲಿ ಗೀತಾಂಜಲಿ ಆರ್. ನಾಯ್ಕ್ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು.

ಆನ್ಸ್ ಹಿರಿಯರ ವಿಭಾಗದಲ್ಲಿ ೫೦ ಮೀ. ಓಟದಲ್ಲಿ, ಶಾಟ್‌ಪುಟ್, ಸ್ಟ್ಯಾಂಡಿಂಗ್ ಜಂಪ್‌ನಲ್ಲಿ ಗೀತಾಂಜಲಿ ಆರ್. ನಾಯ್ಕ್ ಪ್ರಥಮ, ಆನ್ಸ್ ಕಿರಿಯರ ವಿಭಾಗದಲ್ಲಿ ೧೦೦ ಮೀ. ಓಟದಲ್ಲಿ, ೨೦೦ ಮೀ. ಓಟದಲ್ಲಿ, ಲಾಂಗ್‌ಜಂಪ್‌ನಲ್ಲಿ ನಯನ ಕಿಶೋರ್ ಪ್ರಥಮ, ಕೇರಂ ಸಿಂಗಲ್ಸ್‌ನಲ್ಲಿ ಸುರೇಖಾ ಕಿಶೋರ್ ಪ್ರಥಮ, ಹುಡುಗಿಯರ ವಿಭಾಗದಲ್ಲಿ ಶಾಟ್‌ಪುಟ್, ಕೇರಂನಲ್ಲಿ ರೋಶನಿ ಪ್ರಥಮ, ಆನ್ಸ್ ವಿಭಾಗದಲ್ಲಿ ತ್ರೋ ಬಾಲ್ ಪ್ರಥಮ, ರಿಲೇ ಪ್ರಥಮ, ಟೆನ್ನಿಕ್ಯೊಟ್ ಪ್ರಥಮ, ಹಗ್ಗಜಗ್ಗಾಟ ದ್ವಿತೀಯ, ಕೇರಂ ಡಬಲ್ಸ್‌ನಲ್ಲಿ ಗೀತಾಂಜಲಿ ನಾಯ್ಕ್, ಸುರೇಖಾ ಕಿಶೋರ್ ದ್ವಿತೀಯ, ಹೈಜಂಪ್‌ನಲ್ಲಿ ಭಾರತಿ ಪ್ರಕಾಶ್ ಶೆಟ್ಟಿ ಪ್ರಥಮ, ಶಾಟ್‌ಪುಟ್‌ನಲ್ಲಿ ಶಶಿರೇಖಾ ದ್ವಿತೀಯ, ೨೦೦ ಮೀ. ಓಟ, ಲಾಂಗ್‌ಜಂಪ್‌ನಲ್ಲಿ ಭಾರತಿ ಪ್ರಕಾಶ್ ಶೆಟ್ಟಿ ದ್ವಿತೀಯ ಸ್ಥಾನ ಪಡೆದುಕೊಂಡರು.

Call us

Call us

ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ ಪ್ರಥಮ, ಟೇಬಲ್ ಟೆನ್ನಿಸ್ ಸಿಂಗಲ್ಸ್ ವಿಪ್ಲವ್ ರಾವ್ ಪ್ರಥಮ, ಟೇಬಲ್ ಟೆನ್ನಿಸ್ ಡಬಲ್ಸ್ ವಿಪ್ಲವ್ ರಾವ್, ಮನೋಜ್ ನಾಯರ್ ಪ್ರಥಮ, ಶಾಟ್‌ಪುಟ್‌ನಲ್ಲಿ ಮನೋಜ್ ನಾಯರ್ ಪ್ರಥಮ, ಡಿಸ್ಕಸ್ ತ್ರೋನಲ್ಲಿ ಕಿಶೋರ್ ಕೋಟ್ಯಾನ್ ಪ್ರಥಮ, ೧೦೦ ಮೀ. ಓಟ, ತ್ರೋಯಿಂಗ್ ದಿ ತ್ರೋಬಾಲ್‌ನಲ್ಲಿ ಮನೋಜ್ ನಾಯರ್ ದ್ವಿತೀಯ, ಲಾಂಗ್ ಜಂಪ್‌ನಲ್ಲಿ, ಡಿಸ್ಕಸ್ ತ್ರೋನಲ್ಲಿ ರಾಜೇಶ್ ನಾಯರ್ ದ್ವಿತೀಯ ಸ್ಥಾನ ಗಳಿಸಿದರು.

ಅನೆಟ್ ಹುಡುಗರ ವಿಭಾಗದಲ್ಲಿ ಕೇರಂನಲ್ಲಿ, ಸ್ಟ್ಯಾಂಡಿಂಗ್ ಜಂಪ್‌ನಲ್ಲಿ ಕಮಲ್ ಪ್ರಥಮ, ಸುಫಲ್ ದ್ವಿತೀಯ, ೨೦೦ ಮೀ ಓಟದಲ್ಲಿ ಪ್ರಭಾವ್ ಪ್ರಥಮ, ಸುಜಲ್ ದ್ವಿತೀಯ, ಸುಫಲ್ ತೃತೀಯ, ಅನೆಟ್ ಹುಡುಗಿಯರ ವಿಭಾಗದಲ್ಲಿ ೨೦೦ ಮೀ ಓಟದಲ್ಲಿ ತನೀಶ ಪ್ರಥಮ, ಶಕ್ತಿ ದ್ವಿತೀಯ, ಸುಫನ್ನ ತೃತೀಯ, ಅನೆಟ್ ಹಿರಿಯ ಹುಡುಗರ ವಿಭಾಗದಲ್ಲಿ ಸುಶಾನ್ ೨೦೦ ಮೀ. ಓಟದಲ್ಲಿ, ಲಾಂಗ್ ಜಂಪ್‌ನಲ್ಲಿ, ಹೈ ಜಂಪ್‌ನಲ್ಲಿ ದ್ವಿತೀಯ, ಟೆನ್ನಿಕ್ಯೊಟ್‌ನಲ್ಲಿ ತೃತೀಯ, ಹುಡುಗರ ಲಾಂಗ್ ಜಂಪ್‌ನಲ್ಲಿ ಸುಫಲ್ ದ್ವಿತೀಯ, ಪ್ರಭಾವ್ ತೃತೀಯ, ಸ್ಟ್ಯಾಂಡಿಂಗ್ ಜಂಪ್ ಸುಪರ್ಣ ತೃತೀಯ, ಹುಡುಗಿಯರ ಲಾಂಗ್ ಜಂಪ್‌ನಲ್ಲಿ ತನೀಶ ನಾಯರ್ ದ್ವಿತೀಯ ಸ್ಥಾನ ಪಡೆದು ಕೊಂಡರು.

ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿ ಬಹುಮಾನ ವಿತರಿಸಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ರೋಟರಿ ಜಿಲ್ಲಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ೫೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿ, ಪ್ರತ್ಯೇಕಗೊಂಡ ರೋಟರಿ ಜಿಲ್ಲೆ ೩೧೮೨ ಇದರ ಪ್ರಥಮ ಕ್ರೀಡಾಕೂಟದಲ್ಲಿ ಮುಂಚೂಣಿಯನ್ನು ಸಾಧಿಸಿ ಪ್ರಥಮ ಚಾಂಪಿಯನ್ ಕ್ಲಬ್ ಗೌರವಕ್ಕೆ ಪಾತ್ರರಾಗುವಂತೆ ಶ್ರಮವಹಿಸಿದ ರೋಟರಿ ಕುಂದಾಪುರದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

two × three =