ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಗಂಗೊಳ್ಳಿ ರೋಟರಿ ಕ್ಲಬ್ ಚಾಂಪಿಯನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ಆಶ್ರಯದಲ್ಲಿ ಕುಂದಾಪುರದ ಈಸ್ಟ್‌ವೆಸ್ಟ್ ಕ್ಲಬ್‌ನಲ್ಲಿ ಜರಗಿದ ರೋಟರಿ ಜಿಲ್ಲೆ 3182ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ಏಳು ಪ್ರಥಮ ಬಹುಮಾನದೊಂದಿಗೆ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಗೀತ ಗಾಯನ ವಿಭಾಗದ ಏಕವ್ಯಕ್ತಿ ಸೋಲೋ, ಏಕವ್ಯಕ್ತಿ 12 ವರ್ಷ ಮೇಲ್ಪಟ್ಟು ಸೋಲೋ, ಯುಗಳ ಗೀತೆ, ಸಮೂಹ ಗಾಯನದಲ್ಲಿ ಪ್ರಥಮ ಸ್ಥಾನವನ್ನು, ನೃತ್ಯ ವಿಭಾಗದ ಏಕ ವ್ಯಕ್ತಿ ಸೋಲೋ ಮತ್ತು ಸಮೂಹ ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ರಂಗೋಲಿಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಆಗಿ ಮೂಡಿ ಬಂದಿದೆ.

ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಅಭಿನಂದನ ಎ. ಶೆಟ್ಟಿ ವಿಜೇತರರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ಕಾರ್ಯದರ್ಶಿ ಎಂ.ನಾಗೇಂದ್ರ ಪೈ, ರೋಟರಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

three × 5 =