ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆ : ರೋಟರಿ ಕುಂದಾಪುರ ಚಾಂಪಿಯನ್

Call us

Call us

Click here

Click Here

Call us

Call us

Visit Now

ಕುಂದಾಪುರ: ರೋಟರಿ ಕ್ಲಬ್ ಸಿದ್ದಾಪುರ-ಹೊಸಂಗಡಿಯ ಆತಿಥ್ಯದಲ್ಲಿ ಸಿದ್ದಾಪುರದ ರೋಟರಿ ಹಾಲ್‌ನಲ್ಲಿ ನಡೆದ ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆ ರಂಗತರಂಗದಲ್ಲಿ ರೋಟರಿ ಕ್ಲಬ್ ಕುಂದಾಪುರ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ವಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಚಾಂಪಿಯನ್ ಶೀಪ್ ಅವಾರ್ಡ್‌ನ್ನು ಪಡೆದುಕೊಂಡಿದೆ.

Call us

Call us

ಅನೆಟ್ಸ್ ವಿಭಾಗದಲ್ಲಿ ಗಾಯನ ಸ್ಪರ್ಧೆಯಲ್ಲಿ ಲಾವಣ್ಯ ಲಕ್ಷ್ಮೀ ಪ್ರಥಮ, ರೋಟೆರಿಯನ್ ವಿಭಾಗದಲ್ಲಿ ಗಾಯನ ಸ್ಪರ್ಧೆಯಲ್ಲಿ ರವಿರಾಜ್ ಶೆಟ್ಟಿ ಪ್ರಥಮ, ಯುಗಳ ಗೀತೆಯಲ್ಲಿ ಬಿ.ಕಿಶೋರ್‌ಕುಮಾರ್ ಕುಂದಾಪುರ ಮತ್ತು ಶ್ರಾವ್ಯ ಆರ್. ರಾವ್ ದ್ವಿತೀಯ, ಸೋಲೋ ಡ್ಯಾನ್ಸ್‌ನಲ್ಲಿ ಚೈತನ್ಯ ಲಕ್ಷ್ಮೀ ಪ್ರಥಮ, ಗ್ರೂಫ್ ಡ್ಯಾನ್ಸ್‌ನಲ್ಲಿ ರೋಟರಿ ಕ್ಲಬ್ ಕುಂದಾಪುರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕಿರುಪ್ರಹಸನ ವಿಭಾಗದಲ್ಲಿ ರೋಟರಿ ವಲಯ೧ರ ಜೋನಲ್ ಲೆಫ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ನಿರ್ದೇಶನದ ಹುಚ್ಚು ಮನಸ್ಸಿನ ಹತ್ತು ಮುಖಗಳು ಪ್ರಹಸನ ಜನಮೆಚ್ಚುಗೆಯ ಅತ್ಯುತ್ತಮ ಪ್ರದರ್ಶನ ಕಂಡು ಪ್ರಥಮ ಸ್ಥಾನವನ್ನು ಪಡೆಯಿತು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಚಾಂಪಿಯನ್ ಅವಾರ್ಡ್ ಪಡೆದುಕೊಂಡರು. ಕುಂದಾಪುರದ ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್‌ನ ನಿರ್ದೇಶಕ ಡಾ. ಬಿ.ವಿ.ಉಡುಪ ಬಹುಮಾನ ವಿತರಿಸಿದರು. ವಲಯದ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ಜೋನಲ್ ಲೆಪ್ಟಿನೆಂಟ್ ಶ್ಯಾಮರಾಜ್ ಭಟ್, ರೋಟರಿ ಕ್ಲಬ್ ಸಿದ್ದಾಪುರ-ಹೊಸಂಗಡಿಯ ಅದ್ಯಕ್ಷ ಕೃಷ್ಣ ಚಾತ್ರ, ಕಾರ್ಯದರ್ಶಿ ಪಾಂಡುರಂಗ ಪೈ ಇನ್ನಿತರರು ಉಪಸ್ಥಿತರಿದ್ದರು. ಡಾ. ಜಗದೀಶ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು

Leave a Reply

Your email address will not be published. Required fields are marked *

18 + five =