ರೋಟರಿ ವಲಯ-1ರಿಂದ ಅಭಿನಂದನ ಶೆಟ್ಟರಿಗೆ ಸನ್ಮಾನ

Call us

Call us

ರೋಟರಿಗೆ ಸಲ್ಲಿಸಿದ ಸೇವೆ ಅಪಾರ : ಸತೀಶ್ ಎನ್. ಶೇರೆಗಾರ್

Call us

Call us

Call us

ಕುಂದಾಪುರ: ರೋಟರಿ ಇಂಟರ್‌ನ್ಯಾಷನಲ್‌ಗೆ ಕಳೆದ ಮೂರು ತಲೆಮಾರುಗಳಿಂದ ಅನನ್ಯ ಸೇವೆಯನ್ನು ಸಲ್ಲಿಸುತ್ತಾ ಬಂದ ಕುಟುಂಬದ ಹಿನ್ನಲೆಯನ್ನೊಳಗೊಂಡು ಇದೀಗ ರೋಟರಿ ಜಿಲ್ಲೆ 3180 ವಿಭಾಗವಾಗಿ 3181 ಮತ್ತು 3182 ಪ್ರತ್ಯೇಕ ಜಿಲ್ಲೆಗಳಾಗಿ ಮಾರ್ಪಾಡು ಹೊಂದುತ್ತಿರುವ ಕಾಲಘಟ್ಟದಲ್ಲಿ 3182 ಇದರ 2018-19ನೇ ಸಾಲಿನ ರೋಟರಿ ಜಿಲ್ಲಾ ಗವರ್ನರ್ ಆಗಿ ಅವಿರೋಧವಾಗಿ ಆಯ್ಕೆಯಾದ ಅಭಿನಂದನ ಶೆಟ್ಟರು ರೋಟರಿಗೆ ಸಲ್ಲಿಸಿದ ಸೇವೆ ಅಪಾರವಾದುದು ಎಂದು ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು.

Call us

Call us

ಅವರು ರೋಟರಿ ವಲಯ 1ರ ಆಶ್ರಯದಲ್ಲಿ ಕುಂದಾಪುರ ಈಸ್ಟ್‌ವೆಸ್ಟ್ ಕಂಟ್ರಿ ಕ್ಲಬ್‌ನಲ್ಲಿ ನಡೆದ 2018-19ರ ಸಾಲಿನ ಗವರ್ನರ್ ಆಗಿ ಆಯ್ಕೆಯಾದ ಅಭಿನಂದನ ಎ. ಶೆಟ್ಟರ ಸನ್ಮಾನ ಸಮಾರಂಭದಲ್ಲಿ ಅಭಿನಂದನ ಶೆಟ್ಟಿಯವರನ್ನು ಸನ್ಮಾನಿಸಿ ಮಾತನಾಡಿದರು. ರೋಟರಿಯ ಉನ್ನತ ಜವಾಬ್ದಾರಿಯನ್ನು ಹೊತ್ತಿರುವ ಸಂದರ್ಭದಲ್ಲಿ ಹಲವಾರು ಸವಾಲುಗಳು ಕಣ್ಮುಂದೆ ಇದೆ. ಅವೆಲ್ಲವನ್ನು ನಿರೀಕ್ಷೆಗೂ ಮೀರಿ ಸಂಘಟಿಸುವ, ತನ್ಮೂಲಕ ರೋಟರಿ 3182 ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುವ ಶಕ್ತಿ ಭಗವಂತನು ಅನುಗ್ರಹಿಸಲಿ, ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ರೋಟರಿಯ ನಾಯಕರಾಗಿ ಬೆಳೆಯಲಿ ಎಂದು ಸತೀಶ್ ಎನ್. ಶೇರೆಗಾರ್ ಆಶಿಸಿದರು.

ಸನ್ಮಾನಕ್ಕೆ ಉತ್ತರಿಸಿದ ಅಭಿನಂದನ ಶೆಟ್ಟಿ, ರೋಟರಿ ಅಂಗ ಸಂಸ್ಥೆ ರೋಟರ‍್ಯಾಕ್ಟ್ ಮೂಲಕ ಪ್ರವೇಶ ಪಡೆದು ಹತ್ತು ಹಲವು ಜವಬ್ದಾರಿಗಳನ್ನು ನಿಮ್ಮೆಲ್ಲರ ಸಹಕಾರದಿಂದ ನಿರ್ವಹಿಸಿದ್ದು ಮುಂದೆಯೂ ನಿಮ್ಮ ಸಹಕಾರವನ್ನು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಅಭಾರಿಯಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ, ನಿಯೋಜಿತ ಅಸಿಸ್ಟೆಂಟ್ ಗವರ್ನರ್‌ಗಳಾದ ಮಧುಕರ ಹೆಗ್ಡೆ, ನಾಗೇಶ್ಚಂದ್ರ ಭಟ್ ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಸುದರ್ಶನ ಕೆ.ಎಸ್. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

nineteen − three =