ರೋಟರಿ ಸನ್‌ರೈಸ್ : ಆದಾಯ ಘೋಷಣೆ ಮಾಹಿತಿ ಕಾರ್ಯಕ್ರಮ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಯೊಬ್ಬ ಪ್ರಜೆಯು ಪಾರದರ್ಶಕವಾಗಿ ಆದಾಯ ಘೋಷಣೆ ಮಾಡಿದಲ್ಲಿ ದೇಶದ ಆರ್ಥಿಕ ಸ್ಥಿತಿ ಸಮತೋಲನ ಸಾಧಿಸುವುದರಲ್ಲಿ ಸಂಶಯವಿಲ್ಲ ಆದುದರಿಂದ ಆದಾಯ ಘೋಷಣೆ 2016ರ ಕಾಯಿದೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಆದಾಯ ತೆರಿಗೆ ಕಮಿಷನರ್ ಸಿದ್ದಪ್ಪಾಜಿ ಹೇಳಿದರು.

Call us

Call us

ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್, ಅಸೋಸಿಯೇಟ್ ಆಫ್ ಕನ್ಸೆಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ಆಂಡ್ ಆರ್ಕಿಟೆಕ್ಟ್ ಕುಂದಾಪುರ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಮತ್ತು ಆಡಿಷನಲ್ ಕಮಿಷನರ್ ಆಫ್ ಇನ್‌ಕಮ್ ಟ್ಯಾಕ್ಸ್ ಆಫೀಸ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ಆದಾಯ ಘೋಷಣೆ ೨೦೧೬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಸ್ವಾಗತಿಸಿದರು. ರೋಟರಿ ಸನ್‌ರೈಸ್ ಸ್ಥಾಪಕಾಧ್ಯಕ್ಷರಾದ ದಿನಕರ ಆರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂಜಿನಿಯರ‍್ಸ್ ಅಸೋಸಿಯೇಶನ್ ಅಧ್ಯಕ್ಷರಾದ ವಿಠಲ ಆಚಾರ್ಯ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ರೋಟರಿ ದಕ್ಷಿಣದ ಅಧ್ಯಕ್ಷರಾದ ಒಜೊಲಿನ್ ರೆಬೆಲ್ಲೊ ಉಪಸ್ಥಿತರಿದ್ದರು. ರೋಟರಿ ಸನ್‌ರೈಸ್ ಕಾರ್ಯದರ್ಶಿ ನಾಗೇಶ್ ನಾವಡ ಕಾರ್ಯಕ್ರಮ ನಿರೂಪಿಸಿ, ರೋಟರಿ ದಕ್ಷಿಣದ ಕಾರ್ಯದರ್ಶಿ ಫ್ಲೈವನ್ ಡಿ’ಸೋಜಾ ವಂದಿಸಿದರು.

Call us

Call us

Leave a Reply

Your email address will not be published. Required fields are marked *

twenty − 13 =