ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಆಶ್ರಯದಲ್ಲಿ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ ಜರುಗಿತು.
ರೋಟರಿ ಸನ್ರೈಸ್ ಅಧ್ಯಕ್ಷ ಕೆ. ನರಸಿಂಹ ಹೊಳ್ಳ ಅವರು ಇಂಟರ್ಯಾಕ್ಟ್ ಕ್ಲಬ್ನ ಅಧ್ಯಕ್ಷೆ ಶ್ರೇಯಾ ಎಸ್. ಪೂಜಾರಿ, ಕಾರ್ಯದರ್ಶಿ ಆಶೀಷ್ ಚಂದ್ರನ್, ಖಜಾಂಚಿ ಧನ್ವಿ ಎಸ್. ಜೋಗಿ ಅವರಿಗೆ ಪದಪ್ರದಾನ ನೆರವೇರಿಸಿದರು.
ಅತಿ ವಂದನೀಯ ಫಾದರ್ ಅನಿಲ್ ಡಿ,ಸೋಜಾ ಅವರು ಅಧ್ಯಕ್ಷತೆವಹಿಸಿದ್ದರು. ಇಂಟರ್ಯಾಕ್ಟ್ ಕ್ಲಬ್ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ರೋಟರಿ ಸನ್ರೈಸ್ ಸದಸ್ಯ ಉಲ್ಲಾಸ್ ಕ್ರಾಸ್ತಾ ಕೊಡಮಾಡಿದ ೫ಸಾವಿರ ರೂ.ಗಳನ್ನು ಹಸ್ತಾಂತರಿಸಲಾಯಿತು. ರೋಟರಿ ಜೋನಲ್ ಲೆಫ್ಟಿನೆಂಟ್ ಅಬುಶೇಖ್ ಸಾಹೇಬ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂಟರ್ಯಾಕ್ಟ್ ಕ್ಲಬ್ ಛೇರ್ಮೆನ್ ಜಗದೀಶ್ ಚಂದ್ರನ್, ಶಾಲೆಯ ಇಂಟರ್ಯಾಕ್ಟ್ ಕೋ ಆರ್ಡಿನೆಟರ್ ಲೂಯಿಸ್ ಪ್ರಶಾಂತ ರೆಬೆರೋ, ಸಿಸ್ಟರ್ ಜೋಯ್ಸ್ಲಿನ್ ಎ.ಸಿ, ರೋಟರಿ ಸನ್ರೈಸ್ ಸದಸ್ಯರಾದ ಸದಾನಂದ ಉಡುಪ, ಡುಂಡಿರಾಜ್, ದಿನೇಶ್ ಗೋಡೆ, ಕಲ್ಪನಾ ಭಾಸ್ಕರ್, ಉಲ್ಲಾಸ್ ಕ್ರಾಸ್ತಾ ಉಪಸ್ಥಿತರಿದ್ದರು. ಶಿಕ್ಷಕಿ ವಿಜಯಲಕ್ಷ್ಮೀ ಆಚಾರ್ಯ ಸ್ವಾಗತಿಸಿದರು. ಸ್ಮಿತಾ ಡಿ’ಸೋಜಾ ಕಾರ್ಯಕ್ರಮ ನಿರ್ವಹಿಸಿ, ಮೈತ್ರಿ ಪೂಜಾರಿ ವಂದಿಸಿದರು.