ರೋಟರಿ ಸನ್‌ರೈಸ್: ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಜಿಲ್ಲಾ 3182 ಜಿಲ್ಲಾ ಗವರ್ನರ್ ಡಿ. ಎಸ್. ರವಿ ಅವರು ಇತ್ತೀಚೆಗೆ ವಲಯ ಒಂದರ ರೋಟರಿ ಸನ್‌ರೈಸ್ ಕುಂದಾಪುರ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದರು.

Call us

Call us

ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ.ನರಸಿಂಹ ಹೊಳ್ಳ ಅವರು ರೋಟರಿ ಜಿಲ್ಲಾ ಗವರ್ನರ್‌ರನ್ನು ಸ್ವಾಗತಿಸಿ ಕ್ಲಬ್ ಅಸೆಂಬ್ಲಿಯಲ್ಲಿ ಕಳೆದ ಆರು ತಿಂಗಳಲ್ಲಿ ಕ್ಲಬ್ ನಡೆದು ಬಂದ ಹಾದಿಯನ್ನು ವಿವರಿಸಿದರು. ರೋಟರಿಯ ಎಲ್ಲಾ ೫ ಸೇವೆಗಳ ನಿರ್ದೇಶಕರುಗಳಾದ ಬಿ.ಎಂ. ಚಂದ್ರಶೇಖರ, ಶಿವಾನಂದ ಎಂ.ಪಿ, ದಿನೇಶ ಗೋಡೆ, ಉಲ್ಲಾಸ್ ಕ್ರಾಸ್ತಾ ಮತ್ತು ರಾಜು ಪೂಜಾರಿಯವರು ತಮ್ಮ ಸೇವೆಯಡಿ ನಡೆಸಿದ ೮೦ ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ವಿವರಿಸಿದರು.

ಸಂಜೆ ಅಕ್ಷತಾ ಹಾಲ್‌ನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವೈಟ್ ಲಿಫ್ಟರ್ ವಿಶ್ವನಾಥ ಗಾಣಿಗ, ಡ್ರಾಮಾ ಜೂನಿಯರ್ ಆರ್ಟಿಸ್ಟ್ ಅರವಿಂದ ಕೊತ್ವಾಲ್ ಮತ್ತು ಉಡುಪಿ ಜಿಲ್ಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷರಾಗಿ ಅವಿರೋದ ಆಯ್ಕೆ ಆದ ಕ್ಲಬಿನ ಸ್ಥಾಪಕಾಧ್ಯಕ್ಷರಾದ ದಿನಕರ ಆರ್. ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಜಿಲ್ಲಾ ಗವರ್ನರ್ ಡಿ. ಎಸ್. ರವಿಯವರು ಮಾತನಾಡಿ ರೋಟರಿ ಸನ್‌ರೈಸ್ ಕಳೆದ ೬ ತಿಂಗಳಲ್ಲಿ ೮೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದು ತುಂಬಾ ಸಂತಸ ತಂದಿದೆ. ಇದು ಮುಂದುವರಿದು ನೂರರ ಗಡಿ ದಾಟಲಿ ಎಂದು ಶುಭ ಹಾರೈಸಿದರು.

Call us

Call us

ವಲಯ ಒಂದರ ಅಸಿಸ್ಟಂಟ್ ಗವರ್ನರ್ ಮಧುಕರ್ ಹೆಗ್ಡೆಯವರು ಜಿಲ್ಲಾ ಗವರ್ನರ್ ಭೇಟಿಯ ವಿಷೇಶ ಸಂಚಿಕೆ ಕ್ಲಬ್ ಮುಖವಾಣಿ ಸೂರ್ಯೋದಯ ಬಿಡುಗಡೆ ಮಾಡಿದರು. ವಲಯ ಸೇನಾನಿ ಅಬೂಶೇಖ್ ಸಾಹೇಬ್ ಶುಭಾಶಯ ತಿಳಿಸಿದರು. ರೋಟರಿ ವಲಯ ಒಂದರ ಮತ್ತು ಎರಡರ ಸುಮಾರು ೧೫೦ ಕ್ಕೂ ಹೆಚ್ಚು ರೋಟರಿ ಸದಸ್ಯರು ವಲಯ ಮತ್ತು ಜಿಲ್ಲಾ ರೋಟರಿ ನಾಯಕರುಗಳು ಉಪಸ್ಥಿತರಿದ್ದರು. ಕ್ಲಬ್ ದಂಡಪಾಣೆ ಸದಾನಂದ ಉಡುಪ ಮತ್ತು ಕೆ.ಎಸ್. ಮಂಜುನಾಥ ಸಹಕರಿಸಿದರು. ಗಣೇಶ ಸಿ.ಎಚ್. ಪ್ರಾರ್ಥಿಸಿದರು. ಕ್ಲಬ್ ಕಾರ್ಯದರ್ಶಿ ನಾಗೇಶ ನಾವುಡ ವಂದಿಸಿದರು.

Leave a Reply

Your email address will not be published. Required fields are marked *

3 × five =