ರೋಟರಿ ಸನ್‌ರೈಸ್ : ವೃತ್ತಿ ಸೇವೆ ಮಾಹಿತಿ

Call us

Call us

ಕುಂದಾಪುರ: ಪ್ರತಿಯೊಂದು ವೃತ್ತಿಗೆ ಅದರದ ಆದ ಗೌರವವಿರುತ್ತದೆ. ತಮ್ಮ ವೃತ್ತಿಯಲ್ಲಿ ಶಿಸ್ತು, ಗುಣಮಟ್ಟದ ಸೇವೆ, ಸೇವಾವಧಿಯನ್ನು ಗುರುತಿಸಿ ಅಂತಹ ವೃತ್ತಿ ಸಾಧಕರನ್ನು ಗುರುತಿಸಿ ಗೌರವಿಸಿದಾಗ ಅವರಲ್ಲಿ ಸಾರ್ಥಕ ಭಾವ ಮನೆ ಮಾಡುತ್ತದೆ. ವೃತ್ತಿಯಲ್ಲಿ ಇನ್ನಷ್ಟು ಉತ್ಸಾಹದಿಂದ ತೊಡಗಿಕೊಳ್ಳಲು ಅವರಿಗೆ ಪ್ರೇರಣೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಹಾಗಾಗಿ ರೋಟರಿಯಲ್ಲಿ ವೃತ್ತಿಪರ ಸೇವೆಗೆ ಆದ್ಯತೆಯನ್ನು ನೀಡಲಾಗಿದೆ ಎಂದು ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಗಣೇಶ ಶೆಟ್ಟಿ ಮೊಳಹಳ್ಳಿ ಹೇಳಿದರು.

Call us

Call us

Call us

ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ರೋಟರಿಯಲ್ಲಿ ವೃತ್ತಿ ಸೇವೆ ಕುರಿತು ಮಾಹಿತಿ ನೀಡುತ್ತಾ ಮಾತನಾಡಿದರು. ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ಕೆ. ದಿನಕರ ಪಟೇಲ್, ಕಾರ್ಯದರ್ಶಿ ಸಿ. ಎಚ್. ಗಣೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

four + six =