ರೋವರ್-ರೇಂಜರ‍್ಸ್ ನಡಿಗೆ ಪರಿಸರದ ಕಡೆಗೆ – ಒಂದು ದಿನದ ಶಿಬಿರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್-ರೇಂಜರ‍್ಸ್ ಘಟಕದ ವತಿಯಿಂದ ರೋವರ‍್ಸ್ ಲೀಡರ್ ಗಿರೀಶ್ ಕುಮಾರ್ ರವರ ನೇತೃತ್ವದಲ್ಲಿ ಹಡಿನ್ ಇಕೋ ಬೀಚ್, ಬೆಳ್ಕೆ, ಭಟ್ಕಳ. ಇಲ್ಲಿ ಶನಿವಾರದಂದು ರೋವರ್-ರೇಂಜರ‍್ಸ್ ನಡಿಗೆ ಪರಿಸರದ ಕಡೆಗೆ ಎಂಬ ಒಂದು ದಿನದ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ೨೪ ರೋವರ್-ರೇಂಜರ‍್ಸ್ ವಿದ್ಯಾರ್ಥಿಗಳು ಭಾಗವಹಿಸಿ ಹಡಿನ್ ಇಕೋ ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ನಂತರ ಹಡಿನ್ ಇಕೋ ಪಾರ್ಕನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ ಅಲ್ಲಿನ ಉಪವಲಯ ಅರಣ್ಯಾಧಿಕಾರಿಗಳಾದ ಪ್ರಮೋದ್ ನಾಯಕ್ ರವರು ಪರಿಸರದ ರಕ್ಷಣೆಯ ಅವಶ್ಯಕತೆಯ ಬಗೆಗೆ ಉಪನ್ಯಾಸ ನೀಡಿ, ಸಾರ್ವಜನಿಕರ ಸಹಕಾರದಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಶಿಬಿರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸಹ ಕೈ ಜೋಡಿಸಿದರು. ಸಹಾಯಕ ಪ್ರಾಧ್ಯಾಪಕರಾದ ನವೀನ್ ಹೆಚ್.ಜಿ. ಉಪಸ್ಥಿತರಿದ್ದರು.

Call us

Call us

Visit Now

Leave a Reply

Your email address will not be published. Required fields are marked *

5 + nine =